ಕೋವಿಡ್ ವಿರುದ್ಧ ಜಯ | ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Prasthutha|

ವಾಷಿಂಗ್ಟನ್‌: ಕೋವಿಡ್ ಸೋಂಕಿನಿಂದ ತತ್ತರಿಸಿ ಹೋಗಿದ್ದ ಅಮೆರಿಕದಾದ್ಯಂತ ಜು.4ರಂದು ಸಂಭ್ರಮಾಚರಣೆ ನಡೆಯಲಿದ್ದು, ಇದೀಗ ಸಹಜಸ್ಥಿತಿಗೆ ಮರಳಿರುವ ಅಮೆರಿಕ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಂಡಿದೆ.

- Advertisement -

 ಅಮೆರಿಕದಲ್ಲಿ ಕೋವಿಡ್ ನಿಂದಾಗಿ 6 ಲಕ್ಷ ಮಂದಿ ಸತ್ತಿದ್ದು, ಸೋಂಕಿನಿಂದ ಅತಿಹೆಚ್ಚು ಜನರನ್ನು ಕಳೆದುಕೊಂಡಿರುವ ದೇಶಗಳಲ್ಲಿ ಅಮೆರಿಕವೂ ಒಂದು. ಇವೆಲ್ಲದರ ಮಧ್ಯೆಯೂ ಅಮೆರಿಕ 16 ತಿಂಗಳ ನಿರಂತರ ಹೋರಾಟದ ನಂತರ ಸೋಂಕಿನ ವಿರುದ್ಧ ಗೆಲ್ಲಲು ಯಶಸ್ವಿಯಾಗಿದೆ. ಅದಕ್ಕಾಗಿ ಅಮೆರಿಕ ವೈರಸ್‌ ವಿರುದ್ಧದ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಂಡಿದೆ!

ಜು.4ರಂದು ಅಮೆರಿಕದಾದ್ಯಂತ ಸಂಭ್ರಮಾಚರಣೆ ನಡೆಯಲಿದೆ. ಕೊರೊನಾ ವಿರುದ್ಧ ಗೆದ್ದ ಸಂಭ್ರಮಾಚರಣೆಯನ್ನು ಅಮೆರಿಕನ್ನರು ನಡೆಸಲಿದ್ದಾರೆ. ದೇಶ ಈಗ ಸಹಜಸ್ಥಿತಿಗೆ ಬಂದಿದೆ ಎನ್ನುವುದನ್ನು ಸಾರುವುದು ಇದರ ಉದ್ದೇಶ ಎನ್ನಲಾಗಿದೆ.



Join Whatsapp