ಅಮೆಮಾರ್: ಮಸೀದಿಯ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

Prasthutha|

ಫರಂಗಿಪೇಟೆ: ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮಾರ್ ಇದರ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್, ಧಾರ್ಮಿಕ ಮತ ಪ್ರವಚನ, ಬದ್ರಿಯಾ ಕಾಂಪ್ಲೆಕ್ಸ್ ನ ಕಾಮಗಾರಿಗೆ ಚಾಲನೆ ಇತ್ಯಾದಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ. ಎಸ್. ಬಿ ಯವರ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು

- Advertisement -

ಇರ್ಷಾದ್ ದಾರಿಮಿ ಮಿತ್ತಬೈಲ್ ಸಭಾ ಕಾರ್ಯಕ್ರಮದ ಉದ್ಘಾಟನೆಗೈದರು, ಶಮೀಮ್ ತಂಙಳ್ ಕುಂಬೋಲ್ ದುಆ ಆಶೀರ್ವಚನಗೈದರು, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಶಾಸಕ ಯು. ಟಿ ಖಾದರ್, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಯಾಕೂಬ್, ಅಮೆಮಾರ್ ಮಸೀದಿ ಖತೀಬ್ ಮೊಹಮ್ಮದ್ ಅಲಿ ಫೈಝಿ ಇರ್ಫಾನಿ, ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ಸ, ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ದಾರಿಮಿ, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ನಾಸಿರ್ ಲಕ್ಕೀ ಸ್ಟಾರ್, ಅಮೆಮಾರ್ ಮಸೀದಿ ಉಪಾಧ್ಯಕ್ಷ ಎಫ್.ಎ ಖಾದರ್ ಎ.ಎನ್.ಐ ಟ್ರೇಡಿಂಗ್ ಕಂಪನಿಯ ಮಾಲಕರಾದ ಲತೀಫ್ ಗುರುಪುರ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಫರಂಗಿಪೇಟೆ ರೇಂಜ್ ಮದರಸ ಮೇನೇಜ್ಮೆಂಟ್ ಎಸೋಸಿಯೇಶನ್ ಅಧ್ಯಕ್ಷ ಎಸ್ ಹಸನಬ್ಬ, ಪ್ರಧಾನ ಕಾರ್ಯದರ್ಶಿ ಸೆಲೀಮ್ ಕುಂಪನಮಜಲ್, ಫರಂಗಿಪೇಟೆ ಮಸೀದಿ ಅಧ್ಯಕ್ಷ ಉಮರ್ ಫಾರೂಕು, ಕೋಶಾಧಿಕಾರಿ ಮಜೀದ್ ಫರಂಗಿಪೇಟೆ, ಯನೆಪೋಯ ಮೆಡಿಕಲ್ ಕಾಲೇಜ್ ಉಪಾನ್ಯಾಸಕ ಅನ್ವರ್ ಅಮೆಮ್ಮಾರ್ ಸೂಫಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Join Whatsapp