ಅಮೆಮ್ಮಾರ್ ಬದ್ರಿಯಾ ಮದರಸ, ಶಿಕ್ಷಕ-ರಕ್ಷಕ ಸಭೆ

Prasthutha|

ಫರಂಗಿಪೇಟೆ: ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಅಮೆಮ್ಮಾರ್ ಇದರ ವತಿಯಿಂದ ಶಿಕ್ಷಕ-ರಕ್ಷಕ ಸಭೆ ಮಸೀದಿ ಅಧ್ಯಕ್ಷ ಉಮರಬ್ಬ ಅವರ ಅಧ್ಯಕ್ಷತೆಯಲ್ಲಿ ಬದ್ರಿಯಾ ಸಭಾ ಭವನದಲ್ಲಿ ನಡೆಯಿತು.

- Advertisement -

ವಿಶೇಷ ಆಹ್ವಾನಿತಾರಾಗಿ ಉಪನ್ಯಾಸ ನೀಡಿದ SKIMVB  ಮುಫತ್ತಿಶ್ KM ಉಮರ್ ದಾರಿಮಿ ಸಾಲ್ಮರ ಮಕ್ಕಳ ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ವಿಕಸನ ರಕ್ಷಕರ ವ್ಯಕ್ತಿತ್ವದಿಂದ ಅಡಗಿದೆ. ಮಕ್ಕಳ ಶ್ರೇಯೊಭಿವೃದ್ಧಿಗಾಗಿ ಉತ್ತಮ ಕನಸುಗಳನ್ನು ಮತ್ತು ಭರವಸೆಗಳನ್ನು ರಕ್ಷಕರು ನೀಡಿ ಸ್ನೇಹ, ಪ್ರೀತಿಯ ವಾತಾವರಣದಿಂದ ಬೆಳೆಸಬೇಕು ಎಂದರು.

ಮಸೀದಿ ಖತೀಬ್ ಮುಹಮ್ಮದ್ ಅಲಿ ಇರ್ಫಾನಿ ಫೈಝಿ ಉದ್ಘಾಟನೆಗೈದರು. ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಅಧ್ಯಾಪಕರಾದ ಅಬ್ದುಲ್ ಹಮೀದ್ ಆರ್ಷದಿ, ಅಬೂಬಕ್ಕರ್ ಮದನಿ, ಮುಹಮ್ಮದ್ ಸಾದಿಕ್ ಫೈಝಿ, ಅಬ್ದುಲ್ ಮಜೀದ್ ಮುಸ್ಲಿಯಾರ್ ಮಸೀದಿ ಆಡಳಿತ ಸಮಿತಿ ಕಾರ್ಯ ಕಾರಿಣಿ ಸದಸ್ಯರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -



Join Whatsapp