ಆಂಬ್ಯುಲೆನ್ಸ್’ನಲ್ಲಿ ಡೀಸೆಲ್ ಖಾಲಿ: ಆಸ್ಪತ್ರೆಗೆ ತೆರಳುತ್ತಿದ್ದ ರೋಗಿ ಮಾರ್ಗ ಮಧ್ಯೆ ಮೃತ್ಯು

Prasthutha|

ಜೈಪುರ: ಸರ್ಕಾರಿ ಆಂಬ್ಯುಲೆನ್ಸ್’ನಲ್ಲಿ ಇಂಧನ ಖಾಲಿಯಾದ ಪರಿಣಾಮ ರೋಗಿಯೊಬ್ಬರು ಮಾರ್ಗಮಧ್ಯೆಯೇ ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ಬನ್’ಸ್ವಾರದಲ್ಲಿ ನಡೆದಿದೆ.

- Advertisement -

ಬನ್’ಸ್ವಾರ ಜಿಲ್ಲೆಯ ದಾನಾಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸುವುದಾಗಿ ಹೇಳಿದೆ.

40 ವರ್ಷದ ತೇಜಿಯಾ ಎಂಬ ಮಹಿಳೆ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದಕ್ಕೆ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಆಂಬ್ಯುಲೆನ್ಸ್’ನಲ್ಲಿ ಕರೆದೊಯ್ದಿದ್ದರು. ಆದರೆ ಆಂಬ್ಯುಲೆನ್ಸ್ ಇಂಧನದ ಕೊರತೆಯಿಂದಾಗಿ ಇದ್ದಕ್ಕಿದ್ದಂತೆ ಬನ್ ಸ್ವಾರದಿಂದ 10-12 ಕಿ.ಮೀ ದೂರದಲ್ಲಿರುವ ರತ್ಲಾಮ್ ರಸ್ತೆಯ ಟೋಲ್ ಪ್ಲಾಜಾದಲ್ಲಿ ನಿಂತಿದೆ. ಸುಮಾರು ಒಂದು ಕಿಲೋಮೀಟರ್ ವರೆಗೆ ತಳ್ಳಿ, ಡೀಸೆಲ್ ಹಾಕಿದರೂ ಗಾಡಿ ಮುಂದೆ ಹೋಗದಿದ್ದರಿಂದ ಮತ್ತೊಂದು ಆಂಬ್ಯುಲೆನ್ಸ್ ಅನ್ನು ಕರೆಸಿಕೊಳ್ಳಬೇಕಾಯಿತು ಎನ್ನಲಾಗಿದೆ.

- Advertisement -

ರೋಗಿಯು ಆಸ್ಪತ್ರೆಯನ್ನು ತಲುಪಿದಾಗ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಯಾರೂ ದೂರು ಕೊಟ್ಟಿಲ್ಲ.  ಆಂಬ್ಯುಲೆನ್ಸ್ ನಲ್ಲಿ ಡೀಸೆಲ್ ಖಾಲಿಯಾಗಿದೆ ಎಂದು ನಮಗೆ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬನ್ ಸ್ವಾರ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಡಾ.ಎಚ್.ಎಲ್.ತಬಿಯಾರ್ ತಿಳಿಸಿದ್ದಾರೆ.

Join Whatsapp