ಬೈಕ್‍ಗೆ ಅಂಬುಲೆನ್ಸ್ ಡಿಕ್ಕಿ; ಸವಾರ ಮೃತ್ಯು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

Prasthutha|

ಬೀದರ್: ಬೈಕ್‍ಗೆ ಹಿಂಬದಿಯಿಂದ ಭೀಕರವಾಗಿ ಅಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಹುಲಸೂರಿನ ಶಿವಾಜಿ ವೃತದಲ್ಲಿ ನಡೆದಿದೆ.

- Advertisement -

ಮೃತ ಬೈಕ್ ಸವಾರನನ್ನು ಸೂರ್ಯಭಾನು (58) ಎಂದು ಗುರುತಿಸಲಾಗಿದೆ. ಬೈಕ್‍ಗೆ ಡಿಕ್ಕಿಯಾಗಿರುವುದು ಪಶುಸಂಗೋಪನೆ ಅಂಬುಲೆನ್ಸ್ ಎಂದು ತಿಳಿದು ಬಂದಿದೆ. ಬೈಕ್ ಸವಾರ ಹುಲಸೂರು ಪಟ್ಟಣ್ಣದದಿಂದ ಭಾಲ್ಕಿಯ ದೇವನಾಳ ಗ್ರಾಮದ ಕಡೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗೆ ಕಲಬುರಗಿಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಬೈಕ್‍ಗೆ ಅಂಬುಲೆನ್ಸ್ ಡಿಕ್ಕಿಯಾಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

- Advertisement -

ಈ ಸಂಬಂಧ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Join Whatsapp