ಹಾಳಾದ ರಸ್ತೆಯಲ್ಲಿ ಕೆಟ್ಟುಹೋದ ಆಂಬುಲೆನ್ಸ್: ಯಾತನೆ ಅನುಭವಿಸಿದ ಗರ್ಭಿಣಿ

Prasthutha|

ಕಳಸ (ಚಿಕ್ಕಮಗಳೂರು): ಭಾನುವಾರದಂದು ಹಾಳಾದ ರಸ್ತೆಯಿಂದಾಗಿ ಗರ್ಭಿಣಿಯೊಬ್ಬರನ್ನು ಕರೆದೊಯ್ಯತ್ತಿದ್ದ ಆಂಬುಲೆನ್ಸ್ ಕೆಟ್ಟು ನಿಂತು ಗರ್ಭಿಣಿ ಯಾತನೆ ಅನುಭವಿಸಿದ ಘಟನೆ ನಡೆದಿದೆ.

- Advertisement -

108 ಆಂಬುಲೆನ್ಸ್ ನಲ್ಲಿ ಗರ್ಭಿಣಿ ಮಹಿಳೆಯನ್ನು ಹೆರಿಗೆಗಾಗಿ ಕೊಪ್ಪದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಹಳುವಳ್ಳಿ ಸಮೀಪ ಆಂಬುಲೆನ್ಸ್’ನ ಆಕ್ಸೆಲ್ ತುಂಡಾಗಿ ನಿಂತಿತು. ಅದನ್ನು ಕಳಸಕ್ಕೆ ಮತ್ತೊಂದು ವಾಹನದ ಸಹಾಯದಿಂದ ಎಳೆದೊಯ್ದು, ದುರಸ್ತಿ ಮಾಡಿಸಲಾಯಿತು. ಇದಕ್ಕಾಗಿ ಒಂದು ಗಂಟೆ ಕಾಲ ಬೇಕಾಯಿತು. ದುರಸ್ತಿಗೊಂಡ ನಂತರ ಆಂಬುಲೆನ್ಸ್ ಸ್ವಲ್ಪ ದೂರ ಸಂಚರಿಸುವಷ್ಟರಲ್ಲಿ ಮತ್ತೆ ಕೆಟ್ಟು ನಿಂತಿತು. ಮತ್ತೊಂದು ಆಂಬುಲೆನ್ಸ್ ಬಾಳೆಹೊನ್ನೂರಿನಿಂದ ಬರಲು ಒಂದು ಗಂಟೆ ತಗಲಿತು. ನಂತರ ಅವರನ್ನು ಕೊಪ್ಪದ ಆಸ್ಪತ್ರೆಗೆ ಸಾಗಿಸಲಾಯಿತು. ಈ ಪೂರ್ಣ ಅವಧಿಯಲ್ಲಿ, ಕೆಟ್ಟು ನಿಂತಿದ್ದ ಆಂಬುಲೆನ್ಸ್’ನಲ್ಲೇ ಗರ್ಭಿಣಿ ಯಾತನೆ ಅನುಭವಿಸುವಂತಾಯಿತು.

Join Whatsapp