ಬೆಳ್ತಂಗಡಿ ಸೇತುವೆ ಬಳಿ ಆ್ಯಂಬುಲೆನ್ಸ್ ಪಲ್ಟಿ: ಇಬ್ಬರಿಗೆ ಗಾಯ

Prasthutha|

ಬೆಳ್ತಂಗಡಿ: ಬೆಳ್ತಂಗಡಿ ಸೇತುವೆ ಬಳಿ ಆ್ಯಂಬುಲೆನ್ಸ್ ಒಂದು ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

- Advertisement -

ಬೆಳ್ತಂಗಡಿಯ ಆಸ್ಪತ್ರೆಯೊಂದರ ಆ್ಯಂಬುಲೆನ್ಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಕರೆತರಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

- Advertisement -

ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್, ಬೆಳ್ತಂಗಡಿ ಸೇತುವೆ ಬದಿಗೆ ಡಿಕ್ಕಿ ಹೊಡೆದು   ಪಲ್ಟಿಯಾಗಿದೆ. ಈ ವೇಳೆ‌ ವಾಹನದಲ್ಲಿ ಮೂರು ಮಂದಿ ಇದ್ದರು.  ಗಾಯಾಳುಗಳನ್ನು ತಕ್ಷಣ ಬೆಳ್ತಂಗಡಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಅದರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp