December 5, 2020

ಮೂಡುಬಿದಿರೆ | ಶ್ರೀ ಸತ್ಯಸಾರಮಾನಿ ಯುವ ಸೇನೆ ವತಿಯಿಂದ ನಾಳೆ ಅಂಬೇಡ್ಕರ್ ಪರಿನಿಬ್ಬಾಣ ದಿನ | ಸಂಘಟನೆ ಲೋಕಾರ್ಪಣೆ

ಮೂಡುಬಿದಿರೆ : ಶ್ರೀ ಸತ್ಯಸಾರಮಾನಿ ಯುವ ಸೇನೆ, ಕೇಂದ್ರ ಸಮಿತಿ ಮೂಡುಬಿದಿರೆ ಇದರ ವತಿಯಿಂದ ಪರಮಪೂಜ್ಯ, ವಿಶ್ವಮಾನ್ಯ, ಭಾರತರತ್ನ, ಮಹಾನಾಯಕ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ನಾಳೆ (ಡಿ.6, ಭಾನುವಾರ) ನಡೆಯಲಿದೆ. ಅಲ್ಲದೆ, ಶ್ರೀ ಸತ್ಯಸಾರಮಾನಿ ಯುವ ಸೇನೆಯ ಲೋಕಾರ್ಪಣೆ ಕಾರ್ಯ ಇದೇ ಸಂದರ್ಭ ನಡೆಯಲಿದೆ

ಕಾರ್ಯಕ್ರಮವು ಮೂಡುಬಿದಿರೆಯ ಸಮಾಜ ಮಂದಿರ ಆವರಣದ ಸ್ವರ್ಣ ಮಂದಿರದಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಖ್ಯಾತ ಚಲನಚಿತ್ರ ನಟ ಮೋಹನ್ ಶೇಣಿ ಸುಳ್ಯ ಉದ್ಘಾಟಿಸಲಿದ್ದಾರೆ. ಶ್ರೀ ಸತ್ಯಸಾರಮಾನಿ ಯುವ ಸೇನೆಯ ಅಧ್ಯಕ್ಷ ಸುರೇಶ್ ಪಿ.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಪುತ್ತೂರಿನ ಪತ್ರಕರ್ತರು, ಯೋಗಿನಿ ಮಚ್ಚಿನ ಅವರು ‘ಕುಲದೈವ ಕಾನದ-ಕಟದರು ಮತ್ತು ಅವರ ಆದರ್ಶಗಳು’ ಎಂಬ ವಿಚಾರದಲ್ಲಿ ಮುಖ್ಯಭಾಷಣ ಮಾಡಲಿದ್ದಾರೆ. ಬಂಟ್ವಾಳ ತಾಲೂಕು ಆಲದಪದವು ಅಕ್ಷರ ಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಶಿಕ್ಷಕ ಸುಕೇಶ್ ಅವರು ‘ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಸಂದೇಶಗಳು’ ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ.

ಮಂಗಳೂರಿನ ಖ್ಯಾತ ರಂಗನಟ, ಚಲನಚಿತ್ರ ಹಿನ್ನೆಲೆ ಗಾಯಕ ವಿನೋದ್ ರಾಜ್ ಕೋಕಿಲ, ಯುವ ಉದ್ಯಮಿ, ಯುವ ಸಂಕಿರಣ ಅಧ್ಯಕ್ಷ ಲಕ್ಷ್ಮಣ್ ಜಿ.ಎಸ್., ಮೂಡುಬಿದಿರೆಯ ನ್ಯಾಯವಾದಿ ಪ್ರಮೀಳಾ, ಶ್ರೀ ಸತ್ಯಸಾರಮಾನಿ ಯುವ ಸೇನೆಯ ಪ್ರಧಾನ ಕಾರ್ಯದರ್ಶಿ ಉದಯ ಗೋಳಿಯಂಗಡಿ, ಶ್ರೀ ಸತ್ಯಸಾರಮಾನಿ ಯುವ ಸೇನೆಯ ಖಜಾಂಚಿ ರಾಜೇಶ್ ನೆತ್ತೋಡಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ