ಅಂಬೇಡ್ಕರ್ ಭಾರತದ ಮೊದಲ ಪುರುಷ ಸ್ತ್ರೀವಾದಿ: ಶಶಿ ತರೂರ್

Prasthutha|

ಪಣಜಿ: ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಮೊದಲ ಪುರುಷ ಸ್ತ್ರೀವಾದಿಯಾಗಿದ್ದು, ದಶಕಗಳ ಹಿಂದೆಯೇ ಇಂತಹ ವಿಚಾರಗಳನ್ನು ಪ್ರಚಾರಪಡಿಸಿದ್ದರು. ಪ್ರಸ್ತುತ ಪೀಳಿಗೆಯ ರಾಜಕಾರಣಿಗಳೂ ಅವರನ್ನು ಪ್ರಗತಿಪರರು ಎಂದು ಪರಿಗಣಿಸಬಹುದು ಎಂದು ಕಾಂಗ್ರೆಸಿನ ಹಿರಿಯ ನಾಯಕ, ಲೇಖಕ ಶಶಿ ತರೂರ್ ತಿಳಿಸಿದ್ದಾರೆ.

- Advertisement -

ಅವರು ತಮ್ಮ ಇತ್ತೀಚಿಗೆ ಬರೆದ ಅಂಬೇಡ್ಕರ್ ಕುರಿತ ಎ ಲೈಫ್ ಎಂಬ ಪುಸ್ತಕದ ಬಗ್ಗೆ ಗೋವಾದ ಸಾಂಪ್ರದಾಯಿಕ ಫೆಸ್ಟಿವಲ್‌ ಪ್ರಯುಕ್ತ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಬಹುಶಃ ಭಾರತದ ಮೊದಲ ಪುರುಷ ಸ್ತ್ರೀವಾದಿಯಾಗಿದ್ದರು. 1920, 30, 40 ರ ದಶಕದಲ್ಲಿ ಅವರು ಮಹಿಳಾ ಪ್ರೇಕ್ಷಕರ ಮುಂದೆ ಭಾಷಣಗಳನ್ನು ಮಾಡಿದ್ದರು. ಇಂದು ಪುರುಷ ರಾಜಕಾರಣಿಗಳು ಎಂದೆನಿಸಿಕೊಂಡವರು ಅವರನ್ನು ಪ್ರಗತಿಪರರು ಎಂದು ಪರಿಗಣಿಸಬಹುದು ಎಂದು ಶಶಿ ತರೂರ್ ತಿಳಿಸಿದರು.

ಮಹಿಳೆಯರು ತಮ್ಮನ್ನು ಬಲವಂತದ ಮದುವೆಗೆ ಅನುಮತಿಸಬಾರದು ಎಂದು ಅಂಬೇಡ್ಕರ್ ಅವರು ಒತ್ತಾಯಿಸಿದ್ದರು. ಮಹಿಳೆಯರು ಮದುವೆ ವಿಳಂಬ, ಹೆರಿಗೆ ವಿಳಂಬ ಮಾಡುವಂತೆ ಒತ್ತಾಯಿಸಿದ್ದರು. ಮಹಿಳೆ ತಮ್ಮ ಪತಿಯ ಸಮಾನವಾಗಿ ನಿಲ್ಲುವಂತೆ ಒತ್ತಾಯಿಸಿದ್ದರು ಎಂದು ಶಶಿ ತರೂರ್ ತಿಳಿಸಿದ್ದಾರೆ. ಅಂಬೇಡ್ಕರ್ ಅವರು ಶಾಸಕರಾಗಿ ಮಹಿಳಾ ಕಾರ್ಮಿಕರು ಮತ್ತು ಕಾರ್ಮಿಕರಿಗಾಗಿ ಹೋರಾಡಿದ್ದರು. ಇದು 80-90 ವರ್ಷಗಳ ಹಿಂದೆ ಈ ವ್ಯಕ್ತಿಯ ಗಮನಾರ್ಹ ಸ್ತ್ರೀವಾದಿ ಚಿಂತನೆಯಾಗಿದೆ ಎಂದು ಅವರು ತಿಳಿಸಿದರು.

- Advertisement -

ಅಂಬೇಡ್ಕರ್ ಅವರನ್ನು ದಲಿತ ನಾಯಕರಂತೆ ನೋಡುವ ಪ್ರವೃತ್ತಿ ಇದೆ. ಅವರು ದೇಶದ ಪ್ರಮುಖ ನಾಯಕರಾಗಿದ್ದರು ಎಂದು ಅವರು ತಿಳಿಸಿದರು.



Join Whatsapp