“ದೇಶದ ಪ್ರಸ್ತುತ ಪರಿಸ್ಥಿತಿ ನೋಡಿದರೆ ಭಯ ಆಗುತ್ತೆ”: ಅಮರ್ತ್ಯ ಸೇನ್

Prasthutha|

ಕೋಲ್ಕತಾ: ಭಾರತದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಜನರು ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

- Advertisement -

ಯಾರಾದರೂ ಯಾವುದರ ಬಗ್ಗೆಯಾದರೂ ಭೀತಿಗೊಂಡಿದ್ದೀರಾ ಎಂದು ಪ್ರಶ್ನಿಸಿದರೆ ಹೌದು ಎನ್ನುತ್ತೇನೆ. ಹೆದರಿಕೆಯಾಗಲು ಈಗ ಕಾರಣವಿದೆ. ಪ್ರಸ್ತುತ ರಾಷ್ಟ್ರದಲ್ಲಿನ ಪರಿಸ್ಥಿತಿಯೇ ಈ ಭೀತಿಗೆ ಕಾರಣ ಎಂದು ಸಾಲ್ಟ್ ಲೇಕ್ ಪ್ರದೇಶದಲ್ಲಿ ಅಮರ್ತ್ಯ ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಹೇಳಿದರು.

ರಾಷ್ಟ್ರವು ಒಗ್ಗಟ್ಟಿನಿಂದ ಇರಬೇಕು ಎಂದು ಬಯಸುತ್ತೇನೆ. ಐತಿಹಾಸಿಕವಾಗಿ ಉದಾರವಾದಿಯಾಗಿರುವ ರಾಷ್ಟ್ರವು ವಿಭಜನೆಗೊಳ್ಳುವುದನ್ನು ನಾನು ನಿರೀಕ್ಷಿಸುವುದಿಲ್ಲ. ನಾವು ಜೊತೆಯಾಗಿ ಕೆಲಸ ಮಾಡಬೇಕು ಎಂದರು.

- Advertisement -

ಭಾರತವು ಕೇವಲ ಹಿಂದೂ ಅಥವಾ ಮುಸ್ಲಿಮರಿಗೆ ಸೀಮಿತವಾಗಬಾರದು. ಭಾರತ ಕೇವಲ ಹಿಂದೂಗಳ ರಾಷ್ಟ್ರವಾಗುವುದಿಲ್ಲ. ಅದರಂತೆ ಕೇವಲ ಮುಸ್ಲಿಮರಿಂದ ಭಾರತವಾಗುವುದಿಲ್ಲ. ಎಲ್ಲರೂ ಜೊತೆಗೂಡಿ ಮುಂದುವರಿಯಬೇಕು. ಭಾರತೀಯ ಸಂಪ್ರದಾಯವಾಗಿರುವ ಐಕ್ಯತೆ ಮೇಳೈಸಬೇಕು ಎಂದು ಒತ್ತಿ ಹೇಳಿದರು.

1998 ರಲ್ಲಿ ಡಾ.ಅಮರ್ತ್ಯ ಸೇನ್ ಅವರಿಗೆ ಕಲ್ಯಾಣ ಅರ್ಥಶಾಸ್ತ್ರ (Welfare economy)ಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಲಭಿಸಿದೆ.

Join Whatsapp