ಅಮನ್ ಸೆಹ್ರಾವತ್ ದೇಶದ ಕೀರ್ತಿ ಬೆಳಗಿಸಿದ್ದಾರೆ: SDPI

Prasthutha|

ಬೆಂಗಳೂರು: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024 ಒಲಂಪಿಕ್ಸ್ ನಲ್ಲಿ ಪುರುಷರ ಕುಸ್ತಿ 57 ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಅಮನ್ ಸೆಹ್ರಾವತ್ ದೇಶದ ಕೀರ್ತಿ ಬೆಳಗಿಸಿದ್ದಾರೆ ಎಂದು SDPI ತಿಳಿಸಿದೆ.

- Advertisement -

ಈ ಮೂಲಕ ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ಪದಕದ ಸಂಖ್ಯೆಯನ್ನು 6ಕ್ಕೆ ಹೆಚ್ಚಿಸಿಕೊಂಡಿದ್ದು, ಅಮನ್ ಸೆಹ್ರಾವತ್‌ಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ತಿಳಿಸಿದೆ.

ಭಾರತದ ಹಾಕಿ ತಂಡಕ್ಕೂ ಅಭಿನಂದನೆ ಸಲ್ಲಿಸಿದ ಎಸ್ಡಿಪಿಐ, ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024 ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸಿ ನಮ್ಮ ದೇಶಕ್ಕೆ ಕೀರ್ತಿ ತಂದಿದೆ. ತಂಡದ ಎಲ್ಲಾ ಆಟಗಾರರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.



Join Whatsapp