ನವದೆಹಲಿ: ಇತ್ತೀಚೆಗೆ ದೆಹಲಿಯ ಜಹಾಂಗೀರ್ಪುರಿ ಗಲಬೆಗೆ ಸಂಬಂಧಿಸಿದ ಕುರಿತು ಪ್ರಧಾನಿ ಮೋದಿ ಜೊತೆ ಪ್ರಸ್ತಾಪಿಸುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
ಬೋರಿಸ್ ಅವರ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ.
ವಾಯುವ್ಯ ದೆಹಲಿಯ ಜಹಾಂಗೀರ್ ಪುರಿ ಎಂಬಲ್ಲಿ ಬಿಜೆಪಿ ಆಡಳಿತವಿರುವ NDMC, ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಹಲವು ಕಟ್ಟಡಗಳನ್ನು ಕೆಡವಲಾಗಿದೆ. ಸ್ಥಳೀಯರರೊಂದಿಗೆ ನಡೆದ ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಈ ವಿಚಾರದ ಕುರಿತು ಬ್ರಿಟನ್ ಪ್ರಧಾನಿ ಅವರು ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಬೋರಿಸ್, ನಾವು ಯಾವಾಗಲೂ ಕ್ಲಿಷ್ಟಕರ ವಿಚಾರದಲ್ಲಿ ಮಾತುಕತೆ ನಡೆಸುವ ಕೆಲಸಕ್ಕೆ ಮುಂದಾಗುತ್ತೇವೆ. ಭಾರತವು 135 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಜಾನ್ಸನ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ‘ಜೆಸಿಬಿ’ ಕಂಪೆನಿಯ ವಾಹನಗಳನ್ನು ಬಳಸಲಾಗಿತ್ತು. ಇದೇ ವೇಳೆ ಜಾನ್ಸನ್ ಅವರು ಕಾರ್ಖಾನೆಗೆ ಭೇಟಿ ನೀಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಇದರ ಹೊರತಾಗಿಯೂ, ಜಾನ್ಸನ್ ಅವರು ಹಲೊಲ್‌ನಲ್ಲಿರುವ ಘಟಕವನ್ನು ‘ಭಾರತ ಮತ್ತು ಬ್ರಿಟನ್ ಸಂಬಂಧದ ಬಳ್ಳಿ ಜೀವಂತವಾಗಿರುವುದದ ಸಂಕೇತ’ ಎಂದು ಬಿಂಬಿಸಿದ್ದಾರೆ.