ಧರ್ಮ ನಿಂದನೆಯ ಟ್ವೀಟ್ ಆರೋಪ : ‘ಆಲ್ಟ್ ನ್ಯೂಸ್’ನ ಝುಬೈರ್ ಗೆ ಜಾಮೀನು !

Prasthutha|

ಹೊಸದಿಲ್ಲಿ: ‘ಆಲ್ಟ್ ನ್ಯೂಸ್’ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್’ಗೆ ದೆಹಲಿ ಪೊಲೀಸರು ದಾಖಲಿಸಿದ್ದ  ಧರ್ಮ ನಿಂದನೆಯ ಟ್ವೀಟ್ ಪ್ರಕರಣದಲ್ಲಿ ಜಾಮೀನು ದೊರೆತಿದೆ. ದೆಹಲಿ ಕೋರ್ಟ್ ಝುಬೈರ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಅವರಿಗೆ ಜಾಮೀನು ದೊರೆತ ಎರಡನೇ ಪ್ರಕರಣ ಇದಾಗಿದೆ. ಆದರೆ ಇನ್ನೂ ಎರಡು ಪ್ರಕರಣಗಳ ಕೋರ್ಟ್ ವಿಚಾರಣೆ ಬಾಕಿ ಇರುವುದರಿಂದ ಅವರು ಜೈಲಿನಲ್ಲೇ ಇರಬೇಕಾಗಿದೆ.

- Advertisement -

ಇದೀಗ ಝುಬೇರ್ ಅವರಿಗೆ 2018 ರ ಟ್ವೀಟ್ ಕುರಿತು ದೆಹಲಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ. ಈ ಟ್ವೀಟ್ ಗಾಗಿ ಅವರನ್ನು ಜೂನ್ 27 ರಂದು ಬಂಧಿಸಲಾಗಿತ್ತು.

ಝುಬೇರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದ ಬಳಿಕ ಉತ್ತರ ಪ್ರದೇಶದ ಪೊಲೀಸರು ದಾಖಲಿಸಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ಜೈಲಿನಲ್ಲೇ ಉಳಿಯಲಿದ್ದಾರೆ.

- Advertisement -

ರೂ. 50,000 ಬಾಂಡ್ ನೀಡಿಕೆಯ ಮೇಲೆ ಜಾಮೀನು ನೀಡಲಾಗಿದೆ. ಹಾಗೆಯೇ ನ್ಯಾಯಾಲಯಕ್ಕೆ ತಿಳಿಸದೆ ವಿದೇಶಕ್ಕೆ ಹೋಗುವಂತಿಲ್ಲ ಎಂಬ ಷರತ್ತನ್ನು ಕೂಡ ವಿಧಿಸಲಾಗಿದೆ.

ಮುಖ್ಯ ಮೆಟ್ರೋಪಾಲಿಟನ್ ಕೋರ್ಟ್ ಝುಬೈರ್ ರಿಗೆ ದಿಲ್ಲಿ ಮೊಕದ್ದಮೆ ಸಂಬಂಧ ಜಾಮೀನು ನೀಡಲು ನಿರಾಕರಿಸಿದ್ದರಿಂದ ಜು. 2ರಂದು ಸೆಶನ್ಸ್ ಕೋರ್ಟಿಗೆ ಅವರು ಅರ್ಜಿ ಸಲ್ಲಿಸಿದ್ದರು.

ಉತ್ತರ ಪ್ರದೇಶದ ಸೀತಾಪುರ ಮೊಕದ್ದಮೆ ಸಂಬಂಧ ಝುಬೈರ್ ರಿಗೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಜಾಮೀನು ನೀಡಿದೆ.

2017ರ ಧಾರ್ಮಿಕ ನಿಂದನೆಯದೆನ್ನಲಾದ ಟ್ವೀಟ್ ಸಂಬಂಧ ಜೂನ್ 27ರಂದು ಝುಬೈರ್ ರನ್ನು ದಿಲ್ಲಿ ಪೋಲೀಸರು ಬಂಧಿಸಿದ್ದರು.

Join Whatsapp