ನವದೆಹಲಿ: ಕೃಷಿ ಖಾತೆ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ.
ಕರ್ನಾಟಕದ ನಾಲ್ವರು ಕೇಂದ್ರ ಸಚಿವರಿಗೆ ಯಾವ ಖಾತೆ ಹಂಚಿಕೆ?
- ಹೆಚ್ ಡಿ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ
- ಪ್ರಹ್ಲಾದ್ ಜೋಶಿ -ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು
- ಶೋಭಾ ಕರಂದ್ಲಾಜೆ, ರಾಜ್ಯ ಸಚಿವೆ ಸ್ಥಾನ
- ವಿ.ಸೋಮಣ್ಣ- ರಾಜ್ಯ ಸಚಿವ ಸ್ಥಾನ
ಮೋದಿ ಸಂಪುಟದಲ್ಲಿ ಮೂವತ್ತು ಮಂದಿಯನ್ನು ಕ್ಯಾಬಿನೆಟ್ ಮಂತ್ರಿಗಳಾಗಿ, ಐದು ಮಂದಿಯನ್ನು ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರಾಗಿ ಮತ್ತು 36 ಮಂದಿಯನ್ನು ರಾಜ್ಯ ಸಚಿವರನ್ನಾಗಿ ಸೇರಿಸಿಕೊಳ್ಳಲಾಗಿದೆ.
ನಿತಿನ್ ಗಡ್ಕರಿ ಸಾರಿಗೆ ಸಚಿವಾಲಯವನ್ನು ಉಳಿಸಿಕೊಂಡರೆ,ಅಜಯ್ ತಮ್ಟಾ ಮತ್ತು ಹರ್ಷ್ ಮಲ್ಹೋತ್ರಾ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾಗಿದ್ದಾರೆ.
ನಿತಿನ್ ಗಡ್ಕರಿ ಅಲ್ಲದೆ, ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು, ಎಸ್ ಜೈಶಂಕರ್ ಅವರಿಗೆ ವಿದೇಶಾಂಗ ಸಚಿವಾಲಯ ಮುಂದುವರಿದಿದೆ.
ಪ್ರಧಾನಿ ನರೇಂದ್ರ ಮೋದಿಯವರು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪರಮಾಣು ಶಕ್ತಿ, ಬಾಹ್ಯಾಕಾಶ, ಪ್ರಮುಖ ನೀತಿ ನಿರೂಪಣೆಗಳು ಹಾಗೂ ಯಾರಿಗೂ ಹಂಚಕೆಯಾಗದ ಖಾತೆಗಳನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.
ಸಚಿವರು ಮತ್ತು ಖಾತೆಗಳು:
ನಿತಿನ್ ಗಡ್ಕರಿ- ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ
ಅಮಿತ್ ಶಾ- ಗೃಹ ಇಲಾಖೆ
ಅಜಯ್ ತಮ್ತಾ- ರಸ್ತೆ ಸಾರಿಗೆ, ಹೆದ್ದಾರಿ ರಾಜ್ಯ ಸಚಿವಸ್ಥಾನ
ಹರ್ಷ ಮಲ್ಹೋತ್ರ-ರಸ್ತೆ ಸಾರಿಗೆ, ಹೆದ್ದಾರಿ ರಾಜ್ಯಖಾತೆ
ಸುಬ್ರಹ್ಮಣ್ಯಂ ಜೈ ಶಂಕರ್ – ವಿದೇಶಾಂಗ ಇಲಾಖೆ
ರಾಜನಾಥ್ ಸಿಂಗ್ – ರಕ್ಷಣಾ ಇಲಾಖೆ
ಶ್ರೀಪಾದ್ ನಾಯ್ಕ್ – ಇಂಧನ ಖಾತೆ ರಾಜ್ಯ ಸಚಿವಸ್ಥಾನ
ಮನೋಹರ್ ಲಾಲ್ ಖಟ್ಟರ್- ಇಂಧನ, ನಗರಾಭಿವೃದ್ಧಿ ಇಲಾಖೆ
ನಿರ್ಮಲಾ ಸೀತಾರಾಮನ್- ಹಣಕಾಸು ಇಲಾಖೆ
ಶಿವರಾಜ್ ಸಿಂಗ್ ಚೌವ್ಹಾಣ್- ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆ
ಜಿತನ್ ರಾಮ್ ಮಾಂಝಿ- ಸಣ್ಣ, ಮಧ್ಯಮ ಕೈಗಾರಿಕೆ ಖಾತೆ
ಶೋಭಾ ಕರಂದ್ಲಾಜೆ- ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ರಾಜ್ಯ ಖಾತೆ
ಅಶ್ವಿನಿ ವೈಷ್ಣವ್- ಮಾಹಿತಿ ಮತ್ತು ಪ್ರಸಾರ ಖಾತೆ
ಶಿವರಾಜ್ ಸಿಂಗ್ ಡೌಹಾಣ್- ಪಶು ಸಂಗೋಪನೆ
ಸಿ ಆರ್ ಪಾಟೀಲ್ – ಜಲಶಕ್ತಿ ಇಲಾಖೆ
ಕಿರಣ್ ರಿಜು – ಸಂಸದೀಯ ವ್ಯವಹಾರ ಖಾತೆ
ಕ್ಯಾಬಿನೆಟ್ ಮಂತ್ರಿಗಳು
ನರೇಂದ್ರ ಮೋದಿ: ಪ್ರಧಾನಿ
ರಾಜನಾಥ್ ಸಿಂಗ್
ಅಮಿತ್ ಶಾ
ನಿತಿನ್ ಗಡ್ಕರಿ
ಜೆ.ಪಿ.ನಡ್ಡಾ
ಶಿವರಾಜ್ ಸಿಂಗ್ ಚೌಹಾಣ್
ನಿರ್ಮಲಾ ಸೀತಾರಾಮನ್
ಎಸ್ ಜೈಶಂಕರ್
ಮನೋಹರ್ ಲಾಲ್ ಖಟ್ಟರ್
ಹೆಚ್.ಡಿ.ಕುಮಾರಸ್ವಾಮಿ
ಪಿಯೂಷ್ ಗೋಯಲ್
ಧರ್ಮೇಂದ್ರ ಪ್ರಧಾನ್
ಜಿತನ್ ರಾಮ್ ಮಾಂಝಿ
ರಾಜೀವ್ ರಂಜನ್ (ಲಾಲನ್) ಸಿಂಗ್
ಸರ್ಬಾನಂದ ಸೋನೊವಾಲ್
ಧೀರೇಂದ್ರ ಕುಮಾರ್, ಡಾ.
ರಾಮ್ ಮೋಹನ್ ನಾಯ್ಡು
ಪರ್ಲ್ಹಾದ್ ಜೋಶಿ
ಜುವಾಲ್ ಓರಮ್
ಗಿರಿರಾಜ್ ಸಿಂಗ್
ಅಶ್ವಿನಿ ವೈಷ್ಣವ್
ಜ್ಯೋತಿರಾದಿತ್ಯ ಸಿಂಧಿಯಾ
ಭೂಪೇಂದ್ರ ಯಾದವ್
ಗಜೇಂದ್ರ ಶೇಖಾವತ್
ಅನ್ನಪೂರ್ಣ ದೇವಿ
ಕಿರಣ್ ರಿಜಿಜು
ಹರ್ದೀಪ್ ಸಿಂಗ್ ಪುರಿ
ಮನ್ಸುಖ್ ಮಾಂಡವಿಯಾ
ಜಿ ಕಿಶನ್ ರೆಡ್ಡಿ
ಚಿರಾಗ್ ಪಾಸ್ವಾನ್
ಸಿ.ಆರ್.ಪಾಟೀಲ್