ಪಿಎಸ್ಐ ನೇಮಕಾತಿ ದೈಹಿಕ ಪರೀಕ್ಷೆಯಲ್ಲೂ ಅಕ್ರಮದ ಶಂಕೆ: ಹುಬ್ಬಳ್ಳಿಯಲ್ಲಿ ಬೀಡುಬಿಟ್ಟ ಸಿಐಡಿ ತಂಡ

Prasthutha|

ಹುಬ್ಬಳ್ಳಿ: ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಯು ತೀವ್ರಗೊಂಡ ಬೆನ್ನಲ್ಲೇ ಪಿಎಸ್ ಐ ದೈಹಿಕ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿರುವ ಶಂಕೆ ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ವ್ಯಕ್ತವಾಗಿದೆ.
ಪಿಎಸ್ ಐ ನೇಮಕಾತಿಯ ದೈಹಿಕ ಪರೀಕ್ಷೆಯ ಪಾಸ್ ಮಾಡಲು ಲಕ್ಷಾಂತರ ರೂ.ಗಳನ್ನು ಕೆಲ ಅಭ್ಯರ್ಥಿಗಳು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಸಿಐಡಿ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದಾರೆ.
ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಲು ಹುಬ್ಬಳ್ಳಿಯ ಯುವಕನೊಬ್ಬ ಹಣ ಪಡೆದಿರುವ ಮಾಹಿತಿಯಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಜಿ.ಎಸ್.ಸತ್ಯನಾರಾಯಣ ಅವರ ಪುತ್ರ ಕಿರಣ್ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಈ ಸಮಯದಲ್ಲಿ ತಮ್ಮ ಪರಿಚಯದ ವ್ಯಕ್ತಿಯೊಬ್ಬ ಹುಬ್ಬಳ್ಳಿ ಮೂಲದ ನವೀನ್ ಧಲಬಂಜನ ನನ್ನು ಸತ್ಯನಾರಾಯಣಗೆ ಪರಿಚಯ ಮಾಡಿಕೊಟ್ಟಿದ್ದಾರೆ.
30 ಲಕ್ಷ ರೂ ಬೇಡಿಕೆ:
ಈ ವೇಳೆ ದಲಭಂಜನ್, ಪಿಎಸ್ ಐ ಕೆಲಸ ಮಾಡಿಕೊಡುವುದಾಗಿ ಸತ್ಯನಾರಾಯಣಗೆ ತಿಳಿಸಿದ್ದ ಎನ್ನಲಾಗಿದೆ. ಆಗ ಕೆಲಸ ಕೊಡಿಸುವುದಕ್ಕೆ ನವೀನ್ ಧಲಭಂಜನ್ 30 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದ. ಸತ್ಯನಾರಾಯಣ ನವೀನ್ ಬ್ಯಾಂಕ್ ಅಂಕೌಂಟ್ ಗೆ 7,70,000 ರೂಪಾಯಿ ಗಳನ್ನು ಹಾಕಿದ್ದರು. ಅಲ್ಲದೇ 13,50,000 ರೂಪಾಯಿ ಹಣವನ್ನು ನಗದು ರೂಪದಲ್ಲಿ ಕೊಟ್ಟಿದ್ದರು.
ಪಾಸ್ ನಲ್ಲಿ ಅಕ್ರಮ
ದೈಹಿಕ ಪರೀಕ್ಷೆ ಪಾಸ್ ಮಾಡಿಸಿ ಎಂದು ಹಣ ನೀಡಿದ್ದಾರೆ. ಆದರೆ ಕೆಲಸ ಕೊಡಿಸದೇ ಮೋಸ ಮಾಡಿದ್ದಾನೆ ಎಂದು ಸತ್ಯನಾರಾಯಣ ದೂರು ನೀಡಿದ್ದಾರೆ. ಸತ್ಯನಾರಾಯಣ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬಾಗೇಪಲ್ಲಿ ಪೊಲೀಸರು, ಹುಬ್ಬಳ್ಳಿಯ ಲಿಂಗರಾಜನಗರದ ನಿವಾಸಿ 31 ವರ್ಷದ ನವೀನ್ ಧಲಬಂಜ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

- Advertisement -



Join Whatsapp