ವ್ಯಾಪಾರಿಯಿಂದ ಹಣ ವಸೂಲಿ ಮಾಡಿದ ಆರೋಪ; ಮೂವರು ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲು

Prasthutha|

ನವದೆಹಲಿ: ವ್ಯಾಪಾರಿಯೊಬ್ಬರಿಂದ ಹಣ ವಸೂಲಿ ಮಾಡಿದ ಆರೋಪದಲ್ಲಿ ಬೆಂಗಳೂರಿನ ವಿವಿ ಪುರ ಠಾಣೆಯ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರ ವಿರುದ್ಧ ನವದೆಹಲಿಯ ಸೀಮಾಪುರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

- Advertisement -


ಪ್ರಕರಣವೊಂದಕ್ಕೆ ಸಂಬಂಧಿಸಿ ವ್ಯಾಪಾರಿ ಪಂಕಜ್‌ ಜೈನ್‌ ಎಂಬವರಿಗೆ ನೋಟಿಸ್‌ ನೀಡಲು ಹೋದ ಪೊಲೀಸರು ವ್ಯಾಪಾರಿಯಿಂದ ₹25 ಲಕ್ಷ ಹಣ ವಸೂಲಿ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಸೀಮಾಪುರಿ ಠಾಣೆಯಲ್ಲಿ ಲಿಖಿತ ದೂರು ನೀಡಿರುವ ಪಂಕಜ್, ನಾನು ಜಿಲ್‌ಮಿಲ್‌ ಕೈಗಾರಿಕಾ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ತಯಾರಿಸುವ ಫ್ಯಾಕ್ಟರಿ ನಡೆಸುತ್ತಿದ್ದೇನೆ. ಇದೇ 23ರಂದು ಸತೀಶ್‌, ಮುತ್ತುರಾಜ್‌ ಹಾಗೂ ಬಸವರಾಜ ಪಾಟೀಲ ಎಂಬ ಪೊಲೀಸರು ನನ್ನ ಬಳಿಗೆ ಬಂದು ‘ನಿಮ್ಮ ವಿರುದ್ಧ ಆರೆಸ್ಟ್‌ ವಾರೆಂಟ್‌ ಇದೆ. ನಾವು ಕೇಳಿದಷ್ಟು ಹಣ ನೀಡಿದರೆ ತೊಂದರೆ ಕೊಡುವುದಿಲ್ಲ. ಇಲ್ಲದಿದ್ದರೆ ನಿಮ್ಮ ಫ್ಯಾಕ್ಟರಿ ಬಂದ್‌ ಮಾಡಿಸುತ್ತೇವೆ’ ಎಂದು ಬೆದರಿಕೆ ಹಾಕಿದರು. ₹7 ಲಕ್ಷ ನಗದು ಹಾಗೂ ₹13 ಲಕ್ಷವನ್ನು ಚೆಕ್‌ ಮೂಲಕ ಮಧ್ಯವರ್ತಿ ಮೂಲಕ ನೀಡುವಂತೆ ಒತ್ತಡ ಹೇರಿದರು. ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

- Advertisement -

ಸೀಮಾಪುರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Join Whatsapp