ಗೂಗಲ್‌ ವಿರುದ್ಧ ಆರೋಪ; ಸಿಬ್ಬಂದಿ ವಜಾ

Prasthutha|

ವಾಷಿಂಗ್ಟನ್‌: ಗೂಗಲ್‌ ಸಂಸ್ಥೆಯ ಕೃತಕ ಬುದ್ಧಿವಂತಿಕೆಯ (ಎಐ) ಚಾಟ್‌ಬಾಟ್‌ ಆಗಿರುವ ಎಲ್‌ಎಎಂಡಿಎ ಅನ್ನು ಮನುಷ್ಯ ಎಂದು ಹೇಳಿದ್ದ ಸಿಬ್ಬಂದಿ ಬ್ಲೇಕ್‌ ಲೆಮೋಯ್ನ ಎಂಬಾತನನ್ನು ಸಂಸ್ಥೆ ಕೆಲಸದಿಂದ ವಜಾಗೊಳಿಸಿದೆ.

- Advertisement -


ಚಾಟ್‌ಬಾಟ್‌ ಅನ್ನು ಮನುಷ್ಯರೇ ನಿರ್ವಹಿಸುತ್ತಿದ್ದು, ಆದರೆ ಅದನ್ನು ಎಐ ನಿರ್ವಹಿಸುತ್ತಿದೆ ಎಂದು ಗೂಗಲ್ ಸಂಸ್ಥೆ ಸುಳ್ಳು ಹೇಳಿದೆ ಎಂದು ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ಇಂಜಿನಿಯರ್‌ ಬ್ಲೇಕ್‌ ಗಂಭೀರ ಆರೋಪ ಮಾಡಿದ್ದರು.

ಬ್ಲೇಕ್‌ ಲೆಮೋಯ್ನ ಅವರ ಈ ಹೇಳಿಕೆಯನ್ನು ಗೂಗಲ್‌ ತಳ್ಳಿಹಾಕಿದ್ದು, ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ಲೇಕ್‌ ಅವರನ್ನು ಕೆಲಸದಿಂದ ತೆಗೆದಿದೆ. ಕಳೆದ ತಿಂಗಳು ಗೂಗಲ್ ಸಂಸ್ಥೆ ಬ್ಲೇಕ್‌ಗೆ ಒತ್ತಾಯದ ರಜೆ ಘೋಷಿಸಿತ್ತು.



Join Whatsapp