►► ಕಳೆದ 26 ತಿಂಗಳಿನಿಂದ ಜೈಲುವಾಸದಲ್ಲಿದ್ದ ಅಜಂ ಖಾನ್
ಲಕ್ನೋ: ಜೌಹರ್ ವಿಶ್ವವಿದ್ಯಾನಿಲಯದ ಯೋಜನೆಯ ಕಾರ್ಯದಲ್ಲಿ ಆಸ್ತಿಯನ್ನು ಕಬಳಿಸಿದ ಆರೋಪದ ಪ್ರಕರಣದಲ್ಲಿ ಬಂಧನದಲ್ಲಿರುವ ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ.
ಅಜಂ ಖಾನ್ ಸಂಪೂರ್ಣ ಆಸ್ತಿಯನ್ನು ಅರೆಸೇನಾ ಪಡೆಗಳಿಗೆ ಹಿಂದಿರುಗಿಸಬೇಕು, 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಜಾಮೀನುದಾರರನ್ನು ಒದಗಿಸಬೇಕು ಎಂಬ ಷರತ್ತಿನ ಮೇಲೆ ನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಅವರು ಮಧ್ಯಂತರ ಜಾಮೀನು ಆದೇಶ ಹೊರಡಿಸಿದ್ದಾರೆ.
ಆದರೂ ಕಳೆದ ವಾರ ಮತ್ತೊಂದು ಪ್ರಕರಣದಲ್ಲಿ ಖಾನ್ ವಿರುದ್ಧ ರಾಂಪುರ ಜಿಲ್ಲಾ ನ್ಯಾಯಾಲಯ ವಾರಂಟ್ ಹೊರಡಿಸಿದ್ದರಿಂದ ಖಾನ್ ಜೈಲಿನಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಅವರ ವಕೀಲರು ತಿಳಿಸಿದ್ದಾರೆ.
2020ರ ಫೆಬ್ರವರಿ 7 ರಂದು ಆಸ್ತಿ ಕಬಳಿಕೆ ಮತ್ತು ವಿವಿಧ ಪ್ರಕರಣಗಳಡಿಯಲ್ಲಿ ಬಂಧನಗೊಂಡು ಕಳೆದ 26 ತಿಂಗಳಿನಿಂದೀಚೆಗೆ ಶಾಸಕ ಖಾನ್ ಜೈಲು ವಾಸದಲ್ಲಿದ್ದರು.