ಅಂತರ್ ಧರ್ಮೀಯ ವಿವಾಹಕ್ಕೆ ಮತಾಂತರ ಪ್ರಮಾಣಪತ್ರ ಅಗತ್ಯವಿಲ್ಲ: ಅಲಹಾಬಾದ್ ಹೈಕೋರ್ಟ್

Prasthutha|

ಲಕ್ನೋ: ಅಂತರ್ ಧರ್ಮೀಯ ವಿವಾಹವಾಗಲು ಮತಾಂತರ ಪ್ರಮಾಣಪತ್ರವನ್ನು ಜಿಲ್ಲಾ ವಿವಾಹ ನೋಂದಣಿ ಅಧಿಕಾರಿಗಳಿಗೆ ಸಲ್ಲಿಸುವ ಅಗತ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.

- Advertisement -

ನ್ಯಾಯಮೂರ್ತಿ ಸುನೀತ್ ಕುಮಾರ್ ಅವರ ಪೀಠ ಅಂತರ್ ಧರ್ಮೀಯ ಜೋಡಿಗಳ ವಿವಾಹವನ್ನು ತಕ್ಷಣವೇ ನೋಂದಣಿ ಮಾಡುವಂತೆ ವಿವಾಹ ನೋಂದಣಿ ಅಧಿಕಾರಿಗಳಿಗೆ ಸೂಚಿಸಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರ ಪ್ರಮಾಣಪತ್ರದ ಸಲ್ಲಿಸದ ಹೊರತಾಗಿ ವಿವಾಹ ನೋಂದಣಿ ಅಧಿಕಾರಿಗಳು ವಿವಾಹವನ್ನು ರಿಜಿಸ್ಟರ್ ಮಾಡಲು ನಿರಾಕರಿಸಿದ್ದಾರೆ ಎಂಬ ದೂರಿನನ್ವಯ ಅಂತರ್ ಧರ್ಮೀಯ ವಿವಾಹಕ್ಕಾಗಿ ಸಲ್ಲಿಸಿದ್ದ 17 ಅರ್ಜಿಗಳ ಮೇಲೆ ನ್ಯಾಯಾಲಯ ಈ ಆದೇಶ ನೀಡಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕುಮಾರ್, ಮತಾಂತರ ಪ್ರಮಾಣಪತ್ರ ಸಲ್ಲಿಸಲು ಒತ್ತಾಯಿಸುವುದು ದಂಪತಿಗಳ ಜೀವನ, ಸ್ವಾತಂತ್ರ್ಯ ಮತ್ತು ಖಾಸಗಿತನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸದಂತಾಗುತ್ತದೆ ತೀರ್ಪು ನೀಡಿದರು.



Join Whatsapp