ಬಿಜೆಪಿಗೆ ಪಕ್ಷಾಂತರವಾಗಿದ್ದ ನಾಯಕರೆಲ್ಲರು ಪಶ್ಚಾತಾಪದಿಂದ ಮರಳಿ ಟಿಎಂಸಿಗೆ ಸೇರಲು ಸಿದ್ದತೆ

Prasthutha|

ಇತ್ತೀಚ್ಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎದುರಿಸಿದ ದೊಡ್ಡ ಅಗ್ನಿಪರೀಕ್ಷೆಯೆಂದರೆ ತಮ್ಮ ಪಕ್ಷದ ನಾಯಕರು ಬಿಜೆಪಿಗೆ ನಿರಂತರವಾಗಿ ಪಕ್ಷಾಂತರವಾಗಿ ಟಿಎಂಸಿ ಪಕ್ಷ ಪತನವಾಗುತ್ತೆ ಅನ್ನುವ ಮಟ್ಟಿಗೆ ಪಕ್ಷಾಂತರ ಪರ್ವ ಮುಂದುವರಿದಿತ್ತು. ಇದೀಗ ಫಲಿತಾಂಶ ಪ್ರಕಟವಾಗಿ ಒಂದು ತಿಂಗಳ ನಂತರ ಬಿಜೆಪಿಗೆ ಪಕ್ಷಾಂತರವಾದ ಹಲವು ನಾಯಕರು ಟಿಎಂಸಿ ಗೆ ಹಿಂದಿರುಗಳು ಪಶ್ಚಾತಾಪ ಪಟ್ಟು ಸರದಿ ಸಾಲಲ್ಲಿ ನಿಂತಿದ್ದಾರೆ.

- Advertisement -

ಮೇ 2 ರಂದು ಪ್ರಕಟವಾದ ಫಲಿತಾಂಶದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಭರ್ಜರಿ ಜಯ ಗಳಿಸಿ ಎಲ್ಲರನ್ನು ದಿಗ್ಭ್ರಮೆಗೊಳಿಸಿತು. ತೃಣಮೂಲ ಕಾಂಗ್ರೆಸ್ 292 ವಿಧಾನಸಭಾ ಸ್ಥಾನಗಳಲ್ಲಿ 213 ಗೆದ್ದಿದೆ. ಬಿಜೆಪಿ 77 ಸ್ಥಾನಗಳನ್ನು ಗಳಿಸಿತ್ತು.
ಈ ಹಿನ್ನಲೆಯಲ್ಲಿ ಬಿಜೆಪಿಯಿಂದ ಟಿಎಂಸಿಗೆ ಮರು ವಲಸೆ ಪ್ರಾರಂಭವಾಗಿದ್ದು, ಬಿಜೆಪಿಯಿಂದ ತೃಣಮೂಲಕ್ಕೆ ಪಕ್ಷಾಂತರ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಲವರು ಮಮತಾ ಬ್ಯಾನರ್ಜಿ ಪಕ್ಷಕ್ಕೆ ಮರು ಪ್ರವೇಶ ಕೋರಿ ಮನವಿ ಮಾಡುತ್ತಿದ್ದಾರೆ.
ಕಳೆದ ವಾರ ಮಾಜಿ ಶಾಸಕಿ ಸೋನಾಲಿ ಗುಹಾ, ಮಾರ್ಚ್‌ನಲ್ಲಿ ತೃಣಮೂಲವನ್ನು ತೊರೆದ ನಂತರ “ನೀರಿನಿಂದ ಹೊರಬಂದ ಮೀನಿನಂತಹ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮತ್ತೊಮ್ಮೆ ಟಿಎಂಸಿ ಸೇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಫುಟ್ಬಾಲ್ ಆಟಗಾರ-ರಾಜಕಾರಣಿ ದೀಪೇಂದು ಬಿಸ್ವಾಸ್ ಅವರು ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ. ಪಿಟಿಐ ವರದಿಯ ಪ್ರಕಾರ ಅಂತಹ ಇತರ ಹೆಸರುಗಳಲ್ಲಿ ಸರಳಾ ಮುರ್ಮು ಹಾಗೂ ಅಮಲ್ ಆಚಾರ್ಯ ಕೂಡ ಇದ್ದಾರೆ.

“ನಾಯಕರು ಮಾತ್ರವಲ್ಲ, ಏಳರಿಂದ ಎಂಟು ವಿಜೇತ ಶಾಸಕರು ಹಾಗೂ ಬಿಜೆಪಿಯ 3-4 ಹಾಲಿ ಸಂಸದರು ತೃಣಮೂಲ ಕಾಂಗ್ರೆಸ್ ಸೇರಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಬೇಕಾಗಿದೆ. ಈ ನಾಯಕರು ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಪಕ್ಷವನ್ನು ತೊರೆದರು. ಕಾರ್ಯಕರ್ತರು ಹಾಗೂ ನಾಯಕರು ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಎನ್ ಡಿಟಿವಿ ಗೆ ತಿಳಿಸಿದರು.



Join Whatsapp