CAA ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಅಕ್ಟೋಬರ್ 31ರಂದು ಆರಂಭ: ಸುಪ್ರೀಮ್ ಕೋರ್ಟ್

Prasthutha|

ನವದೆಹಲಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (CAA) ಯನ್ನು ಪ್ರಶ್ನಿಸಿ 220 ನ್ನು ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 31 ರಂದು ಆರಂಭಿಸಲಿದ್ದು, ಈ ಪ್ರಕರಣವನ್ನು ವಿಸ್ತೃತ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗುವುದೆಂದು ಸುಪ್ರೀಮ್ ತಿಳಿಸಿದೆ.

- Advertisement -

ಹಲವು ತಿಂಗಳುಗಳ ವಿರಾಮದ ಬಳಿಕ ಈ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರ ಪೀಠದ ಮುಂದೆ ಬಂದಿದೆ.

CAA ಕಾಯ್ದೆಯನ್ನು ಅಸ್ಸಾಮ್ ನ NRC ಯೊಂದಿಗೆ ಜೋಡಿಸುವ ಅರ್ಜಿಗಳು ತನ್ನದೇ ಆದ ವಿಭಿನ್ನ ವಿಭಾಗವಾಗಿರಬೇಕು ಮತ್ತು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕು ಎಂದು ವಕೀಲರು ತಿಳಿಸಿದ್ದಾರೆ.

- Advertisement -

ಪೌರತ್ವ ತಿದ್ದುಪಡಿ ಕಾಯ್ದೆಯ ಅನ್ವಯ ಮುಸ್ಲಿಮೇತರ ವಲಸಿಗರು ಮತ್ತು ಭಾರತದ ನೆರೆಯ ದೇಶಗಳಿಂದ ನಿರಾಶ್ರಿತರು ಡಿಸೆಂಬರ್ 2014ರ ಮೊದಲು ಭಾರತಕ್ಕೆ ಬಂದರೆ ಭಾರತದ ಪೌರತ್ವವನ್ನು ಪಡೆಯಲು ಅವಕಾಶ ನೀಡುತ್ತದೆ.
CAA ಮತ್ತು NRC ಯೋಜನೆಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಾಕರಿಸುವ ಗುರಿಯನ್ನು ಹೊಂದಿದೆ ಎಂಬ ನಿಟ್ಟಿನಲ್ಲಿ ಅನೇಕರು ಅವುಗಳನ್ನು ವಿರೋಧಿಸಿ ಭಾರತದಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಿದ್ದರು.



Join Whatsapp