ಎಲ್ಲಾ ಸಂಸದರು ಮಾಸ್ಕ್ ಧರಿಸಿ ಕಲಾಪಕ್ಕೆ ಬನ್ನಿ: ಸ್ಪೀಕರ್ ಓಂ ಬಿರ್ಲಾ ಸೂಚನೆ

Prasthutha|

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಹೊಡೆತ ನೀವು ನೋಡಿದ್ದೀರಿ. ಮತ್ತೆ ರೂಪಾಂತರಿ ವೈರಸ್’ಗಳ ಕಾಟ ಜಗತ್ತಿನಲ್ಲಿ ಆರಂಭವಾಗಿದೆ. ನೀವೆಲ್ಲರೂ ಜನರಿಗೆ ಮಾದರಿಯಾಗಿ ಮಾಸ್ಕ್ ಧರಿಸಿ ಬರಬೇಕು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಲೋಕಸಭೆಯ ಸದಸ್ಯರಿಗೆ ಗುರುವಾರ ಮನವಿ ಮಾಡಿದ್ದಾರೆ.

- Advertisement -


ಮತ್ತೆ ಕೋವಿಡ್ ಸಾಂಕ್ರಾಮಿಕದ ಹೊಡೆತಕ್ಕೆ ಸಿಕ್ಕಿದ ಕೆಲವು ದೇಶಗಳ ಹೆಸರನ್ನು ಪ್ರಸ್ತಾಪಿಸಿದ ಅವರು, ನಾವು ತಡಮಾಡದೆ ಎಲ್ಲರೂ ಕೋವಿಡ್’ನಿಂದ ರಕ್ಷಿಸಿಕೊಳ್ಳುವ ಮುಂಜಾಗರೂಕತೆ ಕ್ರಮವನ್ನು ತೆಗೆದುಕೊಳ್ಳಬೇಕು. ಎಲ್ಲರೂ ಕೊರೋನಾ ನಿಯಮಾವಳಿ ಪಾಲಿಸುವಂತೆ ಮಾಡಬೇಕು ಎಂದು ಹೇಳಿದರು.
“ಹಿಂದಿನ ಸಾಂಕ್ರಾಮಿಕದ ಹೊಡೆತದಿಂದ ಪಾಠ ಕಲಿತವರಾಗಿ ನಾವು ನಡೆದುಕೊಳ್ಳಬೇಕು” ಎಂದೂ ಬಿರ್ಲಾ ಹೇಳಿದರು.


ಈ ಕಾರಣಕ್ಕೆ ಸಂಸತ್ತಿಗೆ ಬರುವ ಬಾಗಿಲುಗಳಲ್ಲೇ ಮಾಸ್ಕ್ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಒಳಗೆ ಬರುವಾಗ ಮಾಸ್ಕ್ ಹಾಕಿಕೊಳ್ಳುವುದನ್ನು ಮರೆಯಬಾರದು ಎಂದರು.
ಇಂದಿನಿಂದಲೇ ಚೀನಾ ಮೊದಲಾದ ದೇಶಗಳಿಂದ ಬರುವ ಜನರ ಮೇಲೆ ಕೊರೋನಾ ಕಣ್ಗಾವಲಿಗಾಗಿ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಾ ವ್ಯವಸ್ಥೆಗಳನ್ನು ಆರಂಭಿಸಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ವರದಿ ಮಾಡಲು ಬರುವ ಪತ್ರಕರ್ತರಿಗೂ ಮಾಸ್ಕ್ ಹಂಚುವ ವ್ಯವಸ್ಥೆ ಮಾಡಲಾಗಿದೆ ಎಂದೂ ಸಹ ಸ್ಪೀಕರ್ ತಿಳಿಸಿದರು.

- Advertisement -


ಸಂಸತ್ ಭವನದ ಸೆಕ್ರೆಟೇರಿಯೆಟ್’ನಲ್ಲಿ ಮಾಸ್ಕ್ ಧರಿಸಲು ಮತ್ತು ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಕೂಡಲೆ ಆರಂಭವಾಗುವಂತೆ ನೋಡಿಕೊಳ್ಳಬೇಕೆಂದು ಅವರು ತಿಳಿಸಿದರು.
“ನಮಗೆ ಮಾಸ್ಕ್ ಧರಿಸುವಂತೆ ಹೇಳಲಾಗಿದೆ. ನಾವಿದನ್ನು ಸ್ವಾಗತಿಸುತ್ತೇವೆ. ಸಂಸತ್ತಿನ ಸೆಕ್ರೆಟೇರಿಯೆಟ್’ನಲ್ಲಿ ಸಾಕಷ್ಟು ಮಾಸ್ಕ್ ದೊರೆಯುವಂತೆ ವ್ಯವಸ್ಥೆ ಮಾಡಲು ಹೇಳಲಾಗಿದೆ” ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದರು.


ನಾನು ಬರುವಾಗಲೇ ಮಾಸ್ಕ್ ಧರಿಸಿ ಬಂದಿದೆ, ಸ್ಪೀಕರ್ ಸಹ ಒತ್ತಿ ಹೇಳಿದ್ದು ಒಳ್ಳೆಯದಾಯಿತು ಎಂದು ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು.



Join Whatsapp