ನವದೆಹಲಿ: ನಾನಾ ರೀತಿಯ ಮೋಸ ಮಾಡುತ್ತಿರುವ ಸೈಬರ್ ವಂಚಕರು ಈಗ ಮದುವೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ.
ವಾಟ್ಸ್‌ಆ್ಯಪ್ ಮೂಲಕ ಮದುವೆ ಆಮಂತ್ರಣದ ಆ್ಯಪ್ ಕಳಿಸಿ, ಫೋನ್‌ನಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ದೋಚುತ್ತಿದ್ದಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಒಮ್ಮೆ ಈ ಆ್ಯಪ್ ತೆರೆದರೆ ಅದು ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಆಗುತ್ತದೆ. ಬಳಿಕ ಅದರಲ್ಲಿ ಅಳವಡಿಸಿರುವ ಮಾಲ್ವೇರ್ ಮೊಬೈಲ್ ಮೇಲೆ ನಿಯಂತ್ರಣ ಸಾಧಿಸಿ, ಎಲ್ಲ ಮಾಹಿತಿಯನ್ನು ಹ್ಯಾಕರ್‌ಗೆ ರವಾನಿಸುತ್ತದೆ. ಇದನ್ನು ಬಳಸಿಕೊಂಡು ಹ್ಯಾಕರ್‌ಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.