ಅಲ್ ವಹಾ ಫ್ಯಾಶನ್ ಡಿಸೈನ್ ಅಕಾಡೆಮಿ ಶುಭಾರಂಭ ಹಾಗೂ ಪದವಿ ಸಮಾರಂಭ

Prasthutha|

ಅಲ್ ವಹಾ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ (ರಿ) ಅಧೀನದಲ್ಲಿ ಅಲ್ ವಹಾ ಫ್ಯಾಶನ್ ಡಿಸೈನ್ ಅಕಾಡೆಮಿಯು ಇಂದು ಕುಂಡಾಜೆಯಲ್ಲಿ ಶುಭಾರಂಭಗೊಂಡಿತು. ರಾಮಕುಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ಜೆಡಿ ರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆಗೈದರು.

- Advertisement -

ಅಲ್ ವಹಾ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕೌಶಲ್ಯ ಅಭಿವೃದ್ದಿ ತರಬೇತಿ ನಡೆಸಲು ಯೋಜನೆ ರೂಪಿಸಿ ಈ ಟ್ರಸ್ಟ್ ರೂಪಿಸಿ ಅಕಾಡೆಮಿ ಪ್ರಾರಂಭಿಸಿದ್ದು ಇದೀಗಾಗಲೇ ಮೊದಲ ಬ್ಯಾಚ್ ವಿದ್ಯಾರ್ಥಿನಿಯರ ಕೋರ್ಸ್ ಮುಕ್ತಾಯಗೊಂಡಿದ್ದು ಅವರಿಗೆ ಪ್ರಮಾಣ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಟೈಲರಿಂಗ್, ಹ್ಯಾಂಡ್ ಅಂಬ್ರೊಯ್ಡರಿ, ಆರಿ ವರ್ಕ್ ಒಳಗೊಂಡ ಟೈಲರಿಂಗ್ & ಫ್ಯಾಶನ್ ಡಿಸೈನ್ ಕೋರ್ಸ್ ಗಳು , ರಿಸೈನ್ ಕ್ಯಾಲಿಗ್ರಫಿ ತರಬೇತಿ ಕೋರ್ಸ್ ಹಾಗೂ ಮಕ್ಕಳ , ಮಹಿಳೆಯರ ಡ್ರೆಸ್ ಹೊಲಿಗೆ, ಬ್ಲೌಸ್ ಡಿಸೈನ್, ಗೌನ್ ಡಿಸೈನ್, ಬುರ್ಕಾ ಡಿಸೈನ್ ಲಭ್ಯವಿದೆಯೆಂದು ಸಂಸ್ಥೆಯ ನಿರ್ದೇಶಕಿ ಫಾತಿಮತ್ ತಸ್ಲಿಮಾ ತಿಳಿಸಿದರು.

- Advertisement -


ವೇದಿಕೆಯಲ್ಲಿ ಸರಕಾರಿ ಶಾಲಾ ಉಪನ್ಯಾಸಕಿ ಆಯಿಷತ್ ಮಿಸ್ರಿಯಾ ಹಾಗೂ ನಫಿಸಾ ರವರು ಉಪಸ್ಥಿತರಿದ್ದರು.



Join Whatsapp