ಭಾರತೀಯ ಪತ್ರಕರ್ತನಿಗೆ ಅಮೆರಿಕ ಹಿಂದುತ್ವ ಗುಂಪುಗಳಿಂದ ಬೆದರಿಕೆ : ಅಲ್ ಜಝೀರಾ ಖಂಡನೆ

Prasthutha|

ನವದೆಹಲಿ : ಅಮೆರಿಕದಲ್ಲಿ ನೀಡಲಾಗಿದ್ದ ಕೋವಿಡ್ ಪರಿಹಾರ ಅನುದಾನಗಳು ದುರ್ಬಳಕೆಯಾಗುವ ಸಾಧ್ಯತೆಯ ಬಗ್ಗೆ ವರದಿ ಮಾಡಿದ್ದ ಭಾರತೀಯ ಪತ್ರಕರ್ತ ರಖೀಬ್ ಹಮೀದ್ ನಾಯ್ಕ್ ಗೆ ಹಿಂದುತ್ವ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಆನ್ಲೈನ್ ಕಿರುಕುಳ ಮತ್ತು ಕೊಲೆ ಬೆದರಿಕೆ ಹಾಕಿರುವುದನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಅಲ್ ಜಝೀರಾ ಮೀಡಿಯಾ ನೆಟ್ವರ್ಕ್ ಖಂಡಿಸಿದೆ.

- Advertisement -

ಅಮೆರಿಕದಲ್ಲಿ ಹಿಂದುತ್ವವಾದಿ ಮತ್ತು ಅಂತಹ ಧಾರ್ಮಿಕ ಸಮೂಹಗಳೊಂದಿಗೆ ನಂಟು ಹೊಂದಿರುವ ಹಿಂದೂ ಅಮೆರಿಕನ್ ಫೌಂಡೇಶನ್ ಮತ್ತು ಇತರ ನಾಲ್ಕು ಸಂಸ್ಥೆಗಳಿಗೆ 6.10 ಕೋಟಿ ರೂ. ದೇಣಿಗೆ ನೀಡಲಾಗಿದೆ ಎಂದು ಅಲ್ ಜಝೀರಾ ಏಪ್ರಿಲ್ ನಲ್ಲಿ ವರದಿ ಮಾಡಿತ್ತು.

ತನಗೆ ಬೆದರಿಕೆ ಒಡ್ಡಿರುವ ಬಗ್ಗೆ ನಾಯ್ಕ್ ಈಗಾಗಲೇ ಅಮೆರಿಕದ ಪೊಲೀಸ್ ಗೆ ದೂರು ನೀಡಿದ್ದಾರೆ. ಆದರೆ ವ್ಯಕ್ತಿಗಳು ಮತ್ತು ಗುಂಪುಗಳಿಂದ ತನಗೆ ಬೆದರಿಕೆ ಮತ್ತು ಆನ್ಲೈನ್ ಕಿರುಕುಳ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ನಾಯ್ಕ್ ಅವರ ಕಳಂಕ ರಹಿತ ಪತ್ರಿಕೋದ್ಯಮ ಮತ್ತು ವೃತ್ತಿ ಕೊಡುಗೆಗಳನ್ನು ಬೆಂಬಲಿಸುತ್ತೇವೆ ಎಂದು ಅಲ್ ಜಝೀರಾ ಮೀಡಿಯಾ ನೆಟ್ವರ್ಕ್ ಹೇಳಿದೆ.

- Advertisement -

ಹಿಂದೂ ಅಮೆರಿಕನ್ ಫೌಂಡೇಶನ್, ವಿಶ್ವ ಹಿಂದೂ ಪರಿಷತ್ ಅಮೆರಿಕ, ಏಕಲ್ ವಿದ್ಯಾಲಯ ಫೌಂಡೇಶನ್ ಅಮೆರಿಕ, ಇನ್ಫಿನಿಟಿ ಫೌಂಡೇಶನ್ ಮುಂತಾದ ಸಂಸ್ಥೆಗಳಿಗೆ ಮೂರು ಕಾರ್ಯಕ್ರಮಗಳಡಿ ಅನುದಾನ ದೊರಕಿದೆ ಎಂದು ವರದಿ ತಿಳಿಸಿತ್ತು. ಈ ಅನುದಾನ ಭಾರತದಲ್ಲಿ ಮುಸ್ಲಿಂ ಮತ್ತು ಇತರ ಧಾರ್ಮಿಕ ಅಲ್ಪ ಸಂಖ್ಯಾತರ ವಿರುದ್ಧ ದ್ವೇಷ ಹರಡುವುದಕ್ಕೆ ಬಳಕೆಯಾಗ ಬಹುದು ಎಂದು ಮಾನವ ಹಕ್ಕುಗಳಿಗಾಗಿ ಹಿಂದೂಗಳು ಎಂಬ ಗುಂಪಿನ ಸಹ ಸಂಸ್ಥಾಪಕಿ ಸುನೀತಾ ವಿಶ್ವನಾಥ್ ಹೇಳಿದ್ದ ಹೇಳಿಕೆ ಈ ವರದಿಯೊಂದಿಗೆ ಪ್ರಕಟವಾಗಿತ್ತು.

Join Whatsapp