ಕಮಲ್ ಅಭಿನಯದ ‘ವಿಕ್ರಂ’ ಎದುರು ಮಂಕಾದ ಅಕ್ಷಯ್’ನ ‘ಸಾಮ್ರಾಟ್ ಪೃಥ್ವಿರಾಜ್’ ಸಿನೆಮಾ !

Prasthutha|

ಮುಂಬೈ: ನಟ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಚಿತ್ರದ ಎದುರು ತೆರೆಕಂಡಿದ್ದ ಬಾಲಿವುಡ್‌ನ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಮಂಕಾಗಿದೆ. ಎರಡೇ ದಿನಕ್ಕೆ ವಿಕ್ರಮ್ ಚಿತ್ರ 100 ಕೋಟಿ ರೂ. ಗಳಿಸಿದ್ದು, ಕಾಲಿವುಡ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಆದರೆ 300ಕೋಟಿ ಬಜೆಟ್’ನ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಮೊದಲ ದಿನ 10+ ಕೋಟಿ ರೂ. ಗಳಿಸಿದರೆ, ಎರಡನೇ ದಿನ 12+ ಕೋಟಿ ರೂ. ಗಳಿಸಲಷ್ಟೆ ಶಕ್ತವಾಗಿದೆ.

- Advertisement -

ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ ‘ಸಾಮ್ರಾಟ್ ಪೃಥ್ವಿರಾಜ್‌’ ಸಿನಿಮಾ ಮತ್ತು ತಮಿಳು ಚಿತ್ರ ‘ವಿಕ್ರಂ’ ಜೂನ್ 3ರಂದು ತೆರೆಕಂಡಿತ್ತು. ಸುಮಾರು 300 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಭರ್ಜರಿ ಗಳಿಕೆ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಈ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿಯನ್ನೂ ಯೋಗಿ ಆದಿತ್ಯನಾಥ್ ಘೋಷಿಸಿದ್ದರು.

ಅದಾಗ್ಯೂ ‘ವಿಕ್ರಮ್’ ಹವಾ ಜೋರಾಗಿದ್ದೇ ‘ಸಾಮ್ರಾಟ್ ಪೃಥ್ವಿರಾಜ್‌’ ಗೆ ರೆಸ್ಪಾನ್ಸ್ ಕಡಿಮೆಯಾಗಲು ಕಾರಣ ಎನ್ನಲಾಗಿದೆ. ಸಿನಿಮಾದ ಬಜೆಟ್‌ ಜಾಸ್ತಿ ಇರುವುದರಿಂದ ಸಾಕಷ್ಟು ಕಲೆಕ್ಷನ್ ಆಗಬೇಕಿದೆ ಎನ್ನುವುದು ನಿರ್ಮಾಪಕರ ಲೆಕ್ಕಾಚಾರ.

Join Whatsapp