ಹಿಂದೂ ವಿರೋಧಿಯಾದ ಅಕ್ಷಯ್ ಕುಮಾರ್!

Prasthutha|

► #AntiHinduAkshayKumar ಹ್ಯಾಶ್ ಟ್ಯಾಗ್ ಬಳಕೆ

►ಹಿಂದುತ್ವ ಟ್ರೋಲರ್ ಗಳಿಂದ ಲಕ್ಷ್ಮಿ ಬಾಂಬ್ ಚಿತ್ರಕ್ಕೆ ಬಹಿಷ್ಕಾರ ಘೋಷಣೆ

- Advertisement -

ಮುಂಬೈ: ಹಿಂದುತ್ವ ಬ್ರಿಗೇಡ್ ನ ನೆಚ್ಚಿನ ನಟ, ಕಳೆದ ವರ್ಷ ನರೇಂದ್ರ ಮೋದಿಯವರಿಗೆ ರಾಜಕೀಯ ಲಾಭವುಂಟುಮಾಡಬಲ್ಲ ಸಂದರ್ಶನ ಮಾಡಿದ್ದ ಅಕ್ಷಯ್ ಕುಮಾರ್ ಹಿಂದೂ ವಿರೋಧಿಯಾಗಿ ಬದಲಾಗಿದ್ದಾರೆ! ಇತ್ತೀಚೆಗಷ್ಟೆ ಲವ್ ಜಿಹಾದ್ ಹರಡಿದ ಆರೋಪ ಹೊರಿಸಿ ‘ತನಿಶ್ಕ್ ಆಭರಣ ಬ್ರಾಂಡ್ ಜಾಹೀರಾತು ಹಿಂದೆಗೆಯಲು ಕಾರಣವಾದ ಅದೇ ಗುಂಪು ಇಂದು ಅಕ್ಷಯ್ ಕುಮಾರ್ ರ ‘ಲಕ್ಷ್ಮಿ ಬಾಂಬ್’ ಚಿತ್ರದ ವಿರುದ್ಧ ತಿರುಗಿಬಿದ್ದಿದೆ.

ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಂಗಳಮುಖಿ ಲಕ್ಷ್ಮಿ ಆವಾಹಿಸಲ್ಪಟ್ಟ ಆಸಿಫ್ ಆಗಿರುತ್ತಾರೆ. ಭೂತವಲ್ಲದ ಜೀವನದಲ್ಲಿ ಆಸಿಫ್ ಪ್ರಿಯತಮೆ ಪ್ರಿಯಾ ಆಗಿರುತ್ತಾಳೆ. ಚಿತ್ರದ ಹೆಸರು ಲಕ್ಷ್ಮಿ ಬಾಂಬ್ ಎಂದು ಇಟ್ಟಿರುವ ಕಾರಣಕ್ಕೆ, ಮಂಗಳಮುಖಿ ಲಕ್ಷ್ಮಿ ದೇಹದ ಮೇಲೆ ಬಂದಾಗ ಆಸಿಫ್ ಕೆಂಪು ಸೀರೆ, ತ್ರಿಶೂಲ ಧರಿಸಿದ ದೃಶ್ಯಗಳಿರುವುದಕ್ಕಾಗಿ ಹಿಂದೂ ದೇವತೆ ಮಹಾ ಲಕ್ಷ್ಮಿಯನ್ನು ಅವಹೇಳನ ಮಾಡಲಾಗಿದೆ ಎಂದು ಟ್ರೋಲರ್ ಗಳು ಆಕ್ಷೇಪಿಸಿದ್ದಾರೆ.

ಆಸಿಫ್ ಪ್ರಿಯಕರೆ ಹಿಂದೂ ಹುಡುಗಿ ಪ್ರಿಯಾ ಆಗಿರುವ ಕಾರಣದಿಂದ ಸಿನೆಮಾ ‘ಲವ್ ಜಿಹಾದ್’ ಪ್ರಚುರಪಡಿಸುತ್ತದೆ ಎಂದು ಹಿಂದುತ್ವವಾದಿ ನೆಟಿಝೆನ್ ಗಳು ಟೀಕಿಸಿದ್ದಾರೆ. ನಿರೂಪಕಿ ಶಬೀನಾ ಖಾನ್ ಕಾಶ್ಮೀರಿಯಾಗಿರುವ ಕಾರಣಕ್ಕೂ ಸಿನೆಮಾವನ್ನು ಟೀಕಿಸಲಾಗಿದೆ. ಶಬೀನಾ ಖಾನ್ ಓರ್ವ ಕಾಶ್ಮೀರಿ ಪ್ರತ್ಯೇಕತಾವಾದಿಯೆಂದು ಬರೆಯಲಾಗಿದೆ.

“ಶಬೀನಾ ಖಾನ್ ಕಾಶ್ಮೀರಿ ಪ್ರತ್ಯೇಕತಾವಾದಿ. ಕೆಂಪು ಸೀರೆ ಧರಿಸಿ ತ್ರಿಶೂಲ ಹಿಡಿದುಕೊಂಡ ಮಂಗಳಮುಖಿ ಲಕ್ಷ್ಮಿ ಆಸಿಫ್ ನ ದೇಹವನ್ನು ಸೇರಿರುತ್ತಾಳೆ. ಭೂತವಿಲ್ಲದ ಪಾತ್ರದಲ್ಲಿ ಆಸಿಫ್ ನ ಪ್ರಿಯಕರೆ ಪ್ರಿಯಾ. #ShameonAkshayKumar” ಎಂದು ಟ್ವಿಟ್ಟರಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಇನ್ನು ಹಲವರು #AntiHinduAkshayKumar ಎಂಬ ಹ್ಯಾಶ್ ಟ್ಯಾಗ್ ಪೋಸ್ಟ್ ಮಾಡಿ ‘ಲಕ್ಷ್ಮಿ ಬಾಂಬ್’ ಚಿತ್ರವನ್ನು ನಿಷೇಧಿಸಬೇಕು ಮತ್ತು ಬಹಿಷ್ಕರಿಸಬೇಕೆಂದು ಕೋರಿದ್ದಾರೆ.

- Advertisement -