“ಯುಪಿ ಪೋಲಿಸರನ್ನು ನಂಬುವಂತಿಲ್ಲ”| ಇಬ್ಬರು ಮುಸ್ಲಿಮರ ಬಂಧನದ ಕುರಿತಂತೆ ಅಖಿಲೇಶ್ ಹೇಳಿಕೆ

Prasthutha|

  ಲಖ್ನೋ: ಉತ್ತರ ಪ್ರದೇಶದಲ್ಲಿ ಅಲ್ ಖೈದಾ ಸಂಘಟನೆಗೆ ಸೇರಿದ್ದಾರೆಂದು ಆರೋಪಿಸಿ ಇಬ್ಬರನ್ನು ಬಂಧಿಸಿದ ಯುಪಿ ಪೋಲಿಸರ ನಡೆ ಸಂಶಯಾಸ್ಪದವಾಗಿದ್ದು, ಮುಂದಿನ ಚುನಾವಣೆಯನ್ನು ಗುರಿಯಾಗಿಸಿ ಈ ಬಂಧನ ನಡೆದಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಗುಡುಗಿದ್ದಾರೆ.

- Advertisement -

ಅಲ್ ಖೈದಾ ಭಯೋತ್ಪಾದಕರೆಂದು ಆರೋಪಿಸಿ ಇಬ್ಬರನ್ನು ಬಂಧಿಸಿರುವ ಕುರಿತು ತನಗೆ ಯಾವುದೇ ಮಾಹಿತಿಯಿಲ್ಲವೆಂದು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರ ಕುರಿತು ವಿವರಿಸಿದ ಅಖಿಲೇಶ್ ಯಾದವ್ ಅವರು ಯುಪಿ ಪೋಲಿಸರ ವಿರುದ್ಧ ಅದರಲ್ಲೂ ವಿಶೇಷವಾಗಿ ಸರ್ಕಾರವನ್ನು ನಂಬುವಂತಿಲ್ಲವೆಂದು ಈ ಸಂದರ್ಭದಲ್ಲಿ ತಿಳಿಸಿದರು.

 ಯುಪಿ ಪೋಲಿಸರು ಭಾನುವಾರ ಅಲ್ ಖೈದಾ ಬೆಂಬಲಿತ ಸಂಘಟನೆಯಾದ ಅನ್ಸಾರ್ ಗಝ್ವತುಲ್ ಹಿಂದ್ ಗೆ ಸೇರಿದವರೆಂದು ಆರೋಪಿಸಿ ಮಿಹ್ನಾಝ್ ಅಹ್ಮದ್ ಮತ್ತು ಮಸೀರುದ್ದೀನ್ ಎಂಬ ಇಬ್ಬರನ್ನು ಯುಪಿ ಪೋಲಿಸರು ಬಂಧಿಸಿದ್ದರು. ಈ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪತ್ರಿಕಾಗೋಷ್ಟಿಯಲ್ಲಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.

Join Whatsapp