ಅಡುಗೆ ಅನಿಲ, ಇಂಧನ ಬೆಲೆಯೇರಿಕೆ ಹಣದುಬ್ಬರಕ್ಕೆ ಮಹತ್ತರ ಕೊಡುಗೆ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

Prasthutha|

ಲಕ್ನೋ: ಅಡುಗೆ ಅನಿಲ, ಇಂಧನ ಬೆಲೆಯೇರಿಕೆಯ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಈ ಬೆಲೆಯೇರಿಕೆ ಪಂಚ ರಾಜ್ಯಗಳ ಚುನಾವಣೆಯ ಬಳಿಕ ಬಿಜೆಪಿ ಪಕ್ಷದ ವತಿಯಿಂದ ದೇಶದ ಜನತೆಗೆ ‘ಹಣದುಬ್ಬರಕ್ಕೆ ಮತ್ತೊಂದು ಕೊಡುಗೆ’ ಎಂದು ಬಣ್ಣಿಸಿದ್ದಾರೆ.

- Advertisement -

ಪೆಟ್ರೋಲ್, ಡೀಸೆಲ್ ಪ್ರತಿ ಲೀ.ಗೆ 80 ಪೈಸೆ ಮತ್ತು ಅಡುಗೆ ಅನಿಲಕ್ಕೆ 50 ರೂ. ಹೆಚ್ಚಿಸಲಾಗಿದ್ದು, ದರ ಪರಿಷ್ಕರಣೆಯಲ್ಲಿ ನಾಲ್ಕುವರೆ ತಿಂಗಳ ಚುನಾವಣಾ ಪ್ರಕ್ರಿಯೆಯ ವಿರಾಮವನ್ನು ಬಿಜೆಪಿ ಸರ್ಕಾರ ಕೊನೆಗೊಳಿಸಿದೆ ಎಂದು ಕಿಡಿಕಾರಿದ್ದಾರೆ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು ಸಾರ್ವಜನಿಕರಿಂದ ಬಿಜೆಪಿ ಸರ್ಕಾರದಿಂದ ಹಣದುಬ್ಬರದ ಮತ್ತೊಂದು ಉಡುಗೊರೆ ನೀಡಿದೆ. ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣ ದೇಶದಲ್ಲಿ ಹಣದುಬ್ಬರ ತಲೆದೋರಿದ್ದು, ಫಲಿತಾಂಶದ ಬೆನ್ನಲ್ಲೇ ಆಡಳಿತರೂಢ ಬಿಜೆಪಿ ಜನತೆಗೆ ಬೆಲೆಯೇರಿಕೆಯ ಶಾಕ್ ನೀಡಿದೆ ಎಂದು ತಿಳಿಸಿದ್ದಾರೆ.



Join Whatsapp