ರಿಲಾಯನ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಅಕ್ಬರ್ ಬೊಳ್ಳೂರು ಆಯ್ಕೆ

Prasthutha|

ಹಳೆಯಂಗಡಿ: ರಿಲಾಯನ್ಸ್ ಅಸೋಸಿಯೇಷನ್ (ರಿ) ಬೊಳ್ಳೂರು ಇದರ ನೂತನ ಅಧ್ಯಕ್ಷರಾಗಿ ಅಕ್ಬರ್ ಬೊಳ್ಳೂರು ಆಯ್ಕೆಯಾಗಿದ್ದಾರೆ.

- Advertisement -

ಮೊಯಿದಿನ್ ಹಳೆಯಂಗಡಿಯವರ ಅಧ್ಯಕ್ಷತೆಯಲ್ಲಿ ರಿಲಾಯನ್ಸ್ ಭವನದಲ್ಲಿ ನಡೆದ ಸಂಸ್ಥೆಯ 26ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ರಿಯಾಜ್ ಕೊಪ್ಪಳ. ಕಾರ್ಯದರ್ಶಿಯಾಗಿ
ಇಕ್ಬಾಲ್ ಎಂ.ಎ. ಜೂತೆ ಕಾರ್ಯದರ್ಶಿಯಾಗಿ
ಫಾರೂಕ್ ನವರಂಗ್, ಇಲ್ಯಾಸ್ ಬೊಳ್ಳೂರ್. ಲೆಕ್ಕ ಪರಿಶೋಧಕರಾಗಿ ಕೌಶಿಕ್ ಎಂ.ಸಿ.ಎಫ್ ಅವರು ಆಯ್ಕೆಯಾದರು.

- Advertisement -

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಮುಬಾರಕ್ ಬೊಳ್ಳೂರ್. ಸ್ವಯಂಸೇವಕ ಉಸ್ತುವಾರಿಗಳಾಗಿ ಮಮ್ತಾಜ್ ಅಲಿ, ಮೊಹಮ್ಮದ್ ಆಲಿ ಇಂದಿರಾನಗರ. ಜಿಸಿಸಿ ಸಂಯೋಜಕರಾಗಿ ಆರಿಸ್ ನವರಂಗ್, ಮುಬಾರಕ್ ಬೊಳ್ಳೂರ್, ಫಾರೂಕ್ ನವರಂಗ್. ಮತ್ತು
ಸಲಹೆಗಾರರಾಗಿ ಆರಿಶ್ ನವರಂಗ್, ಶಮೀಮ್ ಬೊಳ್ಳೂರು, ಸಿದ್ದಿಕ್ ಬೊಳ್ಳೂರ್ ಅವರನ್ನು ಆಯ್ಕೆ ಮಾಡಲಾಯಿತು.

ರಿಲಾಯನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಇಕ್ಬಾಲ್ ಎಂ.ಎ ವಾರ್ಷಿಕ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಯೂಸುಫ್ ಹೈದರ್ ಬೊಳ್ಳೂರ್, ಹಮೀದ್ ಎಂ.ಸಿ.ಎಫ್ ಉಪಸ್ಥಿತರಿದ್ದರು.

Join Whatsapp