ಅಜಿಂಕ್ಯ ರಹಾನೆ ಇತಿಹಾಸ | ಪ್ರತಿಷ್ಠಿತ ‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಕ್ರಿಕೆಟಿಗ!

Prasthutha|

ಮೆಲ್ಬೊರ್ನ್ : ಪ್ರಥಮ ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಟೆಸ್ಟ್ ವೃತ್ತಿ ಜೀವನದಲ್ಲಿ 12ನೇ ಶತಕ ಪೂರೈಸಿದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಪ್ರತಿಷ್ಠಿತ ‘ಮುಲ್ಲಾಘ್ ಪದಕ’ದ ಸ್ವೀಕರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

- Advertisement -

1868ರಲ್ಲಿ ಜಾನಿ ಮುಲ್ಲಾಘ್ ಅವರ ನಾಯಕತ್ವದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಗೆ ಮೊದಲ ಬಾರಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿತ್ತು. ಈ ಸ್ಮರಣಾರ್ಥವಾಗಿ ಮಾಜಿ ನಾಯಕನ ಹೆಸರಿನಲ್ಲಿ ಈ ಪದಕ ನೀಡಲಾಗಿದೆ. ಬಾಕ್ಸಿಂಗ್ ಡೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಆಟಗಾರನಿಗೆ ಈ ಪದಕ ನೀಡಲು ನಿರ್ಧರಿಸಲಾಗಿತ್ತು. ಈ ಆಟದಲ್ಲಿ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಪ್ರತಿಷ್ಠಿತ ‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪಾತ್ರರಾಗಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

Join Whatsapp