ಬೆಂಗಳೂರು: ‘ವಿಂಕ್ ಮ್ಯೂಸಿಕ್’ ಅನ್ನು ಮುಚ್ಚುವುದಾಗಿ ಭಾರ್ತಿ ಏರ್ ಟೆಲ್ ಹೇಳಿದೆ. ವಿಂಕ್ ನ ಎಲ್ಲಾ ಉದ್ಯೋಗಿಗಳನ್ನು ಏರ್ಟೆಲ್ ನ ವಿವಿಧ ವಿಭಾಗಗಳಿಗೆ ನಿಯೋಜಿಸುವುದಾಗಿ ಹೇಳಿದೆ.
ಆ್ಯಪಲ್ ನೊಂದಿಗೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ, ವಿಂಕ್ ಮ್ಯೂಸಿಕ್ ಅನ್ನು ಮುಚ್ಚುವ ಘೋಷಣೆ ಹೊರಬಿದ್ದಿದೆ.
2014ರಲ್ಲಿ ವಿಂಕ್ ಮ್ಯೂಸಿಕ್ ಅನ್ನು ಏರ್ ಟೆಲ್ ಪರಿಚಯಿಸಿತ್ತು. ಆಫ್ ಲೈನ್ ನಲ್ಲಿ ಹಾಡುಗಳನ್ನು ಕೇಳಲು ಡೌನ್ ಲೋಡ್ ಮಾಡಿಕೊಳ್ಳಲು, ಕಾಲರ್ ಟ್ಯೂನ್ ಅಗಿ ಹಾಡನ್ನು ಹಾಕಿಕೊಳ್ಳಲು, ಪಾಡ್ ಕಾಸ್ಟ್ ಹಾಗೂ ವಿವಿಧ ಭಾಷೆಗಳ ಹಾಡುಗಳನ್ನು ಆಲಿಸಲು ಇದರಲ್ಲಿ ಸಾಧ್ಯವಿತ್ತು.
ಭಾರತೀಯ ಬಳಕೆದಾರರಿಗೆ ಒಟಿಟಿ ವಿಡಿಯೊ ಹಾಗೂ ಸಂಗೀತ ಸೇವೆಗಳಿಗೆ, ಆ್ಯಪಲ್ ಟಿವಿ+ ಹಾಗೂ ಆ್ಯಪಲ್ ಮ್ಯೂಸಿಕ್ ಸೌಲಭ್ಯಕ್ಕೆ ಆ್ಯಪಲ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗಿ ಭಾರ್ತಿ ಏರ್ಟೆಲ್ ಹೇಳಿದೆ.