‘Mangalore’ ಹೆಸರನ್ನು ‘Mangaluru’ ಎಂದು ಬದಲಾವಣೆ ಮಾಡಿದ ವಿಮಾನ ನಿಲ್ದಾಣ ಪ್ರಾಧಿಕಾರ

Prasthutha|

ಮಂಗಳೂರು: ನಗರವನ್ನು ‘ಮಂಗಳೂರು’ ಎಂದು ಬದಲಾವಣೆ ಮಾಡಿದ್ದರೂ ಇಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಾಖಲೆ, ಬೋರ್ಡ್ ಸಹಿತ ಸ್ವಾಗತ ಕಮಾನುಗಳಲ್ಲಿ ‘Mangalore’ಎಂದೇ ಇತ್ತು. ಇದೀಗ ವಿಮಾನ ನಿಲ್ದಾಣ ಪ್ರಾಧಿಕಾರ ‘ಮಂಗಳೂರು’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

- Advertisement -


ಡಿ.1ರಿಂದ ಇದು ಜಾರಿಗೆ ಬರಲಿದೆ ಎಂದು ತಿಳಿದು ಬಂದಿದ್ದು, ‘ಮಂಗಳೂರು’ ಪದ ಬಳಕೆ ನಗರದಲ್ಲೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಗೂ ದೇಶ-ವಿದೇಶದ ಪಾಲುದಾರರ ನಡುವಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.



Join Whatsapp