ಸಮುದ್ರದಲ್ಲಿ ವಿಮಾನ ಪತನ: ನಾಲ್ವರು ಸಾವು !

Prasthutha: December 19, 2021

ಸಿಡ್ನಿ: ಪೂರ್ವ ಅಸ್ಟ್ರೇಲಿಯಾದ ಕರಾವಳಿಯಲ್ಲಿ ಇಂದು ಬೆಳಗ್ಗೆ ಲಘು ವಿಮಾನವೊಂದು ಸಮುದ್ರದಲ್ಲಿ ಪತನಗೊಂಡಿದ್ದು, ಇಬ್ಬರು ಮಕ್ಕಳು, ಪೈಲಟ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಲಘು ವಿಮಾನದ ಫೈಲಟ್ ಇತರ ಮೂವರು ಜ್ವಾಲಿ ರೈಡ್ ಗಾಗಿ ಪ್ರಯಾಣ ಬೆಳೆಸಿದ್ದರು. ಈ ವಿಮಾನದಲ್ಲಿ ಇಬ್ಬರು ಮಕ್ಕಳು ಉಪಸ್ಥಿತರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಲಘು ವಿಮಾನ ಹಾರಾಟದ ಅಲ್ಪ ಸಮಯದ ನಂತರ ಬ್ರಿಸ್ಬೇನ್ ನ ಈಶಾನ್ಯದ ಜೌಗು ಪ್ರದೇಶದಲ್ಲಿ ಪತನವಾಗಿದೆ. ಸದ್ಯ ವಿಮಾನವು ಮೊರೆಟನ್ ಕೊಲ್ಲಿಯಲ್ಲಿ ತಲೆಕೆಳಕಾಗಿ ಬಿದ್ದು ನೀರಿನಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮುಂದಿನ ಆರರಿಂದ ಎಂಟು ವಾರಗಳಲ್ಲಿ ಅಫಘಾತದ ಸಂಭವನೀಯ ಕಾರಣಗಳ ಕುರಿತ ವರದಿಯನ್ನು ಪೂರ್ಣಗೊಳಿಸಲಾಗುವುದೆಂದು ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಮಂಡಳಿಯ ಆಯುಕ್ತ ಆಂಗಸ್ ಮಿಚೆಲ್ ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!