ತಾಲಿಬಾನಿಗರು ಭಾರತದ ಮೇಲೆ ದಾಳಿಗೆ ಮುಂದಾದರೆ ವೈಮಾನಿಕ ದಾಳಿ: ಯೋಗಿ ಆದಿತ್ಯನಾಥ್

Prasthutha|

ಲಕ್ನೋ: ತಾಲಿಬಾನ್ ಬಂಡುಕೋರರಿಂದಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿಚಲಿತವಾಗಿದೆ. ಒಂದು ವೇಳೆ ತಾಲಿಬಾನ್ ಭಾರತದ ಮೇಲೆ ದಾಳಿಗೆ ಮುಂದಾದರೆ, ವೈಮಾನಿಕ ದಾಳಿಗೆ ಭಾರತ ಸಿದ್ಧವಾಗಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.

- Advertisement -

ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳ ಮಧ್ಯೆ ಹೇಳಿಕೆ ನೀಡಿದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಶಕ್ತಿಯುತವಾಗಿದೆ. ಯಾವುದೇ ದೇಶ ಭಾರತದ ಮೇಲೆ ದಾಳಿಗೆ ಮುಂದಾಗಲು ಧೈರ್ಯ ಮಾಡುವುದಿಲ್ಲ. ಇಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಾಲಿಬಾನ್ ನಿಂದ ತೊಂದರೆ ಅನುಭವಿಸುತ್ತಿದೆ. ಭಾರತದ ಮೇಲೆ ತಾಲಿಬಾನ್ ಬಂಡುಕೋರರು ದಾಳಿ ನಡೆಸಿದರೆ ವೈಮಾನಿಕ ದಾಳಿಯ ಮೂಲಕ ಪ್ರತ್ಯುತ್ತರ ನೀಡಬೇಕಾದೀತು ಎಂಬ ಹೇಳಿಕೆ ನೀಡಿದ್ದಾರೆ.

- Advertisement -

ಗೃಹ ಸಚಿವರು ನೀಡಬೇಕಾದ ಹೇಳಿಕೆಯನ್ನು ಒಂದು ರಾಜ್ಯದ ಮುಖ್ಯಮಂತ್ರಿ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.



Join Whatsapp