ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ವಾಯುಮಾಲಿನ್ಯದಿಂದ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ, ಸರ್ಕಾರ ಜನರ ಓಡಾಟಕ್ಕೆ ಬ್ರೇಕ್ ಹಾಕಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವು ಹೆಚ್ಚಿನ ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಿದೆ. ತೀವ್ರವಾದ ವಾಯುಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳನ್ನು ನಿಗ್ರಹಿಸಲು ಸೋಮವಾರದಿಂದ ಕೆಲವು ಪ್ರದೇಶಗಳಲ್ಲಿ ಅಂಗಡಿಗಳು, ಮಾರುಕಟ್ಟೆಗಳು ಮತ್ತು ಮಾಲ್ ಗಳನ್ನು ಮುಚ್ಚಲು ಆದೇಶಿಸಿದೆ.
ಜನರು ಹೊರಗಡೆ ಹೆಚ್ಚು ಓಡಾಡದಂತೆ ಕ್ರಮ ವಹಿಸಲಾಗಿದೆ. ಸ್ವಿಸ್ ಗ್ರೂಪ್ IQAir ನ ಲೈವ್ ರೇಟಿಂಗ್ ಗಳ ಪ್ರಕಾರ, ವಾಯು ಗುಣಮಟ್ಟದಲ್ಲಿ ವಿಶ್ವದ ಅತ್ಯಂತ ಕಲುಷಿತ ನಗರವಾದ ಲಾಹೋರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನ.17 ರ ವರೆಗೆ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಾನಗಳು ಮತ್ತು ಪ್ರಾಣಿಸಂಗ್ರಹಾಲಯಗಳಂತಹ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ.
ಲಾಹೋರ್, ಮುಲ್ತಾನ್, ಫೈಸಲಾಬಾದ್ ಮತ್ತು ಗುಜ್ರಾನ್ ವಾಲಾ ಜಿಲ್ಲೆಗಳಲ್ಲಿ ಉಸಿರಾಟದ ಕಾಯಿಲೆಗಳು, ಕಣ್ಣು ಮತ್ತು ಗಂಟಲಿನ ಕಿರಿಕಿರಿ ಮತ್ತು ಗುಲಾಬಿ ಕಣ್ಣಿನ ಕಾಯಿಲೆಯ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.