ದೀಪಾವಳಿ ಬಳಿಕ ಬೆಂಗಳೂರಿನಲ್ಲಿ ಏರಿಕೆ ಕಂಡ ವಾಯುಮಾಲಿನ್ಯ !

Prasthutha|

ಬೆಂಗಳೂರು: ದೀಪಾವಳಿ ಹಬ್ಬದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ವಾಯುಮಾಲಿನ್ಯ ಏರಿಕೆ ಕಂಡಿದೆ. ಪಟಾಕಿ ಬಳಕೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವಾಯುಮಾಲಿನ್ಯ ಏರಿಕೆ ಕಂಡಿದ್ದು , ಇದೀಗ ರಾಜ್ಯದಲ್ಲಿಯೂ ವಾಯುಮಾಲಿನ್ಯದ ಪ್ರಮಾಣದಲ್ಲಿ ಏರಿಕೆ ಕಂಡಿದೆ.

- Advertisement -

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನಗರದಲ್ಲಿ ಮಾಲಿನ್ಯದ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿದ್ದು. ಕಳೆದ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರಿಂದ ಮಾಲಿನ್ಯದ ಪ್ರಮಾಣ ಕಡಿಮೆಯಿತ್ತು. ಆದರೆ ಈ ದೀಪಾವಳಿಗೆ ರಾಜ್ಯವು ಅನ್ಲಾಕ್ ಆಗಿರುವ ಹಿನ್ನೆಲೆ ಹಬ್ಬದ ಸಮಯದಲ್ಲಿ ಮಾಲಿನ್ಯದ ಪ್ರಮಾಣ ಏರಿಕೆ ಕಂಡಿದೆ.

2020ರಲ್ಲಿ ವಾಯು ಗುಣಮಟ್ಟ ಸೂಚ್ಯಂಕ 55 ಇತ್ತು. 2021ರಲ್ಲಿ ವಾಯು ಗುಣಮಟ್ಟ ಸೂಚ್ಯಂಕ 67ಕ್ಕೆ ಏರಿಕೆ ಕಂಡಿದ್ದು , ಗುಣಮಟ್ಟ ಕುಸಿದಿದೆ ಎಂದು ವರದಿ ತಿಳಿಸಿದೆ.

Join Whatsapp