ಏರ್​ ಬಸ್​​ನಿಂದ 250 ವಿಮಾನ ಖರೀದಿಸಲಿರುವ ಏರ್‌ ಇಂಡಿಯಾ

Prasthutha|

ಹೊಸದಿಲ್ಲಿ: ಫ್ರಾನ್ಸ್‌ನ ಪ್ರಮುಖ ವಿಮಾನ ತಯಾರಿಕಾ ಕಂಪನಿ ಏರ್‌ಬಸ್​ನಿಂದ ಟಾಟಾ ಸಮೂಹದ ಒಡೆತನದ ಏರ್​ ಇಂಡಿಯಾ 250 ವಿಮಾನಗಳನ್ನು ಖರೀದಿಸಲಿದೆ.

- Advertisement -

ಈ ಕುರಿತ ಒಪ್ಪಂದ ಅಂತಿಮಗೊಂಡಿದ್ದು, ಮಂಗಳವಾರ ಅಧಿಕೃತ ಘೋಷಣೆ ಹೊರಬಿದ್ದಿದೆ. ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ ಎಂದೇ ಇದನ್ನು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಏರ್​ ಇಂಡಿಯಾ 470 ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದ್ದು, ಈ ಪೈಕಿ 220 ವಿಮಾನಗಳನ್ನು ಬೋಯಿಂಗ್ ಕಂಪನಿಯಿಂದ ಖರೀದಿಸಲಿದೆ.

- Advertisement -

ಈ ಒಪ್ಪಂದವು ಭಾರತ-ಫ್ರಾನ್ಸ್​​ ನಡುವಣ ಬಾಂಧವ್ಯದಲ್ಲಿ ಮಹತ್ವದ ಮೈಲಿಗಲ್ಲು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಬಣ್ಣಿಸಿದ್ದಾರೆ.

Join Whatsapp