ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ, ಮುಂದಿನ ದಿನಗಳಲ್ಲಿ ಹಿಂದೂ ಮತ್ತು ಸಿಖ್ ಸಮುದಾಯದ ಪ್ರಯಾಣಿಕರಿಗೆ ‘ಹಲಾಲ್’ ಪ್ರಮಾಣಕೃತ ಆಹಾರ ವಿತರಣೆ ಮಾಡುವುದಿಲ್ಲ ಎಂದು ಹೇಳಿದೆ.
ಇದೇ ವರ್ಷದ ಜೂನ್ 17ರಂದು ವಿರುದುನಗರದ ಕಾಂಗ್ರೆಸ್ ಸಂಸದ ಮಣಿಕಂ ಟ್ಯಾಗೋರ್ , ಏರ್ ಇಂಡಿಯಾದಲ್ಲಿ ಧರ್ಮದ ಆಧಾರದ ಮೇಲೆ ಊಟವನ್ನು ಲೇಬಲ್ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಏರ್ ಇಂಡಿಯಾ ವೆಬ್ ಸೈಟ್ ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡ ಸಂಸದರು “ಹಿಂದೂ” ಅಥವಾ “ಮುಸ್ಲಿಂ” ಊಟ ಎಂದರೇನು ಎಂದು ಖಾರವಾಗಿ ಪ್ರಶ್ನಿಸಿದ್ದರು. ನಾಗರಿಕ ವಿಮಾನಯಾನ ಸಚಿವಾಲಯದಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ನಾಯಕ, “ಸಂಘಿಗಳು ಏರ್ ಇಂಡಿಯಾವನ್ನು ವಶಪಡಿಸಿಕೊಂಡಿದ್ದಾರೆಯೇ?” ಎಂದು ಪ್ರಶ್ನೆ ಮಾಡಿದ್ದರು.