ಸಸ್ಯಾಹಾರಿ ಪ್ರಯಾಣಿಕನಿಗೆ ನಾನ್ ವೆಜ್ ನೀಡಿದ ಸಿಬ್ಬಂದಿಗಳನ್ನು ಅಮಾನತುಗೊಳಿಸಿದ ಏರ್ ಇಂಡಿಯಾ

Prasthutha|

ದೆಹಲಿ: ಸಸ್ಯಾಹಾರಿ ಪ್ರಯಾಣಿಕನಿಗೆ ನಾನ್ ವೆಜ್ ಊಟ ನೀಡಿದ ಆರೋಪಕ್ಕೆ ಸಂಬಂಧಿಸಿ ತನ್ನ ಇಬ್ಬರು ಸಿಬ್ಬಂದಿಗಳನ್ನು ಏರ್ ಇಂಡಿಯಾ ಸಂಸ್ಥೆ ವಜಾಗೊಳಿಸಿದೆ. ಮಾರ್ಚ್ 25ರಂದು ಟೋಕಿಯೊ-ದೆಹಲಿ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕನಿಗೆ ಮಾಂಸಾಹಾರ ನೀಡಿದ ಕಾರಣಕ್ಕಾಗಿ ಇಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದ್ದರೂ, ಮಾಂಸಹಾರದ ಊಟ ನೀಡಲಾಗಿದೆ ಎಂದು ಪ್ರಯಾಣಿಕರು ದೂರಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಈ ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.



Join Whatsapp