ನವದೆಹಲಿ: ಭಾರತದ ಮೊದಲ ಪರವಾನಗಿ ಪಡೆದ ಪೈಲಟ್ ಆಗಿದ್ದ ಜೆ. ಆರ್. ಡಿ. ಟಾಟಾ ಆರಂಭಿಸಿದ್ದ ಭಾರತೀಯ ವಿಮಾನ ಸಂಸ್ಥೆ ಮತ್ತೆ ಟಾಟಾ ಸುಪರ್ದಿಗೆ ಬಂದಿದೆ.ಜೆ.ಆರ್. ಡಿ ಟಾಟಾರವರು 1932ರಲ್ಲಿ ವಿಮಾನ ಯಾನ ಸಂಸ್ಥೆ ಆರಂಭಿಸಿದ್ದರು. ಅದನ್ನು 1952ರ ಸೆಪ್ಟೆಂಬರ್ 29ರಂದು ರಾಷ್ಟ್ರೀಕರಣ ಮಾಡಲಾಗಿತ್ತು.
ಮೋದಿ ಸರಕಾರವು ಏರ್ ಇಂಡಿಯಾ ಮಾರಲು ಬಿಡ್ ಕರೆದಿತ್ತು. 7 ಜನ ಬಿಡ್ ಮಾಡಿದ್ದು, ಅವರಲ್ಲಿ 5 ಸಂಸ್ಥೆಗಳು ನಿಯಮಾವಳಿ ಅನುಸರಿಸಿರಲಿಲ್ಲ. ಉಳಿದ ಇಬ್ಬರಲ್ಲಿ ಹೆಚ್ಚಿನ ಬಿಡ್ ಮಾಡಿದ ಟಾಟಾ ಸಂಸ್ಥೆಗೆ ಮತ್ತೆ ಏರ್ ಇಂಡಿಯಾ ಸೇರಲಿದೆ ಎಂದು ಡಿಐಪಿಎಎಂ- ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.