ನವದೆಹಲಿ । ಏರ್ ಇಂಡಿಯಾ ದೆಹಲಿ – ಮಾಸ್ಕೋ ವಿಮಾನ ರದ್ದು

Prasthutha|

ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಬೆದರಿಕೆ ಹೆಚ್ಚಿದ್ದು, ವಿಮೆಯ ಮೇಲಿನ ಸುರಕ್ಷತೆಯನ್ನು ಖಾತ್ರಿಪಡಿಸದ ಕಾರಣ ಏರ್ ಇಂಡಿಯಾ ದೆಹಲಿ – ಮಾಸ್ಕೋಗೆ ವಾರಕ್ಕೆ ಎರಡು ಬಾರಿಯ ಹಾರಾಟವನ್ನು ರದ್ದುಗೊಳಿಸಿದೆ ಎಂದು ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.

- Advertisement -

ಏರ್ ಇಂಡಿಯಾದ ಎಲ್ಲಾ ವಿಮಾನಗಳು ಅಂತರಾಷ್ಟ್ರೀಯ ಏಜೆನ್ಸಿಗಳಿಂದ ವಿಮೆ ಮಾಡಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್’ನ ಮೇಲೆ ದೇಶದ ದಾಳಿಯ ನಂತಾರ್ ರಷ್ಯಾದ ವಾಯುಪ್ರದೇಶವನ್ನು ಬಳಸುವುದನ್ನು ಮುಂದುವರಿಸುವ ಕೆಲವೇ ವಿಮಾನಯಾನ ಸಂಸ್ಥೆಗಳಲ್ಲಿ ಏರ್ ಇಂಡಿಯಾ ಒಂದಾಗಿದೆ ಎಂದು ಹೇಳಲಾಗಿದೆ.

ಪ್ರಸಕ್ತ ಟಾಟ್ ಗ್ರೂಪ್ ನಿಂದ ನಿಯಂತ್ರಿಸಲ್ಪಡುತ್ತಿರುವ ಏರ್ ಇಂಡಿಯಾ ವಿಮಾನ ದೆಹಲಿ- ಮಾಸ್ಕೋ ನಡುವಿನ ಪ್ರಯಾಣದ ಟಿಕೆಟ್ ಮಾರಾಟವನ್ನು ನಿಲ್ಲಿಸಿದೆ ಮತ್ತು ಏರ್ ಇಂಡಿಯಾದ ಭವಿಷ್ಯ ಅಸ್ಪಷ್ಟವಾಗಿದೆ ಎಂದು ರಷ್ಯಾದ ರಾಯಭಾರಿ ಕಚೇರಿ ವರದಿ ಮಾಡಿದೆ.

- Advertisement -

ಇದರ ಹೊರತಾಗಿಯೂ ತಾಷ್ಕೆಂಟ್, ಇಸ್ತಾಂಬುಲ್, ದುಬೈ, ಅಬುಧಾಬಿ, ದೋಹಾ ಮತ್ತು ಇತರ ಸಾರಿಗೆ ಮಾರ್ಗಗಳನ್ನು ಬಳಸಿಕೊಂಡು ದೆಹಲಿಯಿಂದ ಮಾಸ್ಕೋಗೆ ಪ್ರಯಾಣಿಸಲು ಸಾಧ್ಯವಿದೆ ಎಂದು ರಷ್ಯಾದ ರಾಯಭಾರಿ ಕಚೇರಿ ತಿಳಿಸಿದೆ.



Join Whatsapp