ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡ ಏರ್ ಫ್ರಾನ್ಸ್ ಫೈಲಟ್: ತಪ್ಪಿದ ಭಾರೀ ಅನಾಹುತ

Prasthutha|

ಪ್ಯಾರಿಸ್: ನ್ಯೂಯಾರ್ಕ್‌ನಿಂದ ಆಗಮಿಸಿದ ಏರ್ ಫ್ರಾನ್ಸ್ ವಿಮಾನದ ಪೈಲಟ್‌ಗಳು ಲ್ಯಾಂಡಿಂಗ್ ವೇಳೆ ಭಾಗಶಃ ನಿಯಂತ್ರಣ ಕಳೆದುಕೊಂಡ ಭಾರೀ ಅನಾಹುತವೊಂದು ತಪ್ಪಿದ ಘಟನೆ ಪ್ಯಾರಿಸ್’ನ ಪ್ರಧಾನ ಏರ್ಪೋರ್ಟ್ ನಲ್ಲಿ ನಡೆದಿದ್ದು, ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸುವುದಾಗಿ ಫ್ರಾನ್ಸ್ ವಾಯುಯಾನ ಸಂಸ್ಥೆ ತಿಳಿಸಿದೆ.

- Advertisement -

ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 777 ವಿಮಾನವು ಲ್ಯಾಂಡಿಂಗ್ ಸಮಸ್ಯೆಯಿಂದಾಗಿ ಗಂಭೀರ ಅಪಘಾತ ಪರಿಸ್ಥಿಯನ್ನು ಎದುರಿಸಿತ್ತು ಎಂದು ನಾಗರಿಕ ವಿಮಾನಯಾನ ಸಂಸ್ಥೆ ಸುರಕ್ಷತಾ ವಿಭಾಗ ದೃಢಪಡಿಸಿದೆ.

ಅಂತಿಮವಾಗಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು ಮತು ಇದರಿಂದ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಲಾಗಿದೆ.

- Advertisement -

ಅಂತರ್ಜಾಲದಲ್ಲಿ ಪೋಸ್ಟ್ ಮಾಡಲಾದ ಕಾಕ್ ಪಿಟ್ ಮತ್ತು ನಿಯಂತ್ರಣ ಕೊಠಡಿ ನಡುವಿನ ಸಂಭಾಷಣೆಯು ಘಟನೆಯ ಗಂಭೀರತೆಯನ್ನು ಒತ್ತಿ ಹೇಳುತ್ತದೆ.

ವಿಮಾನದಲ್ಲಿರುವ ಡೇಟಾ ಮತ್ತು ಬ್ಲಾಕ್ ಬಾಕ್ಸ್ ನಲ್ಲಿನ ಕಾಕ್ ಪಿಟ್ ಸಂಭಾಷಣೆಗಳನ್ನು ಮರುಪಡೆಯಲಾಗಿದೆ ಮತ್ತು ಪ್ರಸ್ತುತ ವಿಶ್ಲೇಷಿತಲಾಗುತ್ತಿದೆ ವಿಮಾನಯಾನ ಸಂಸ್ಥೆ ತಿಳಿಸಿದೆ.

Join Whatsapp