ಉ.ಪ್ರ.ದಲ್ಲಿ 100 ಸ್ಥಾನಗಳಲ್ಲಿ ಸರ್ಧಿಸಲಿರುವ ಎಐಎಂಐಎಂ । 2ನೇ ಪಟ್ಟಿ ಬಿಡುಗಡೆಗೊಳಿಸಿದ ಅಸದುದ್ದೀನ್ ಉವೈಸಿ

Prasthutha|

ಲಕ್ನೋ: ಉತ್ತರ ಪ್ರದೇಶದಲ್ಲಿ ಎಐಎಂಐಎಂ ಪಕ್ಷವು 100 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಎರಡನೇ ಪಟ್ಟಿಯನ್ನು ಸಂಸದ ಅಸದುದ್ದೀನ್ ಉವೈಸಿ ಬಿಡುಗಡೆಗೊಳಿಸಿದ್ದಾರೆ.

- Advertisement -

ಈ ಹಿಂದೆ ಸಂಸದ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಪಕ್ಷವು 17 ಸ್ಥಾನಗಳಿಗೆ ಅಧ್ಯರ್ಥಿಗಳನ್ನು ಘೋಷಿಸಿತ್ತು.
ಸದ್ಯ ಬಿಡುಗಡೆಗೊಳಿಸಿದ ಪಟ್ಟಿಯ ಪ್ರಕಾರ ಡಾ. ಮಹತಾಬ್ ಲೋನಿ ಕ್ಷೇತ್ರದಿಂದ ಮತ್ತು ಪಂಡಿತ್ ಮನಮೋಹನ್ ಖಾ ಅವರು ಸಾಹಿಬಾಬಾದ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.

ಮಾತ್ರವಲ್ಲ ಉತ್ರೌಲಾ ಕ್ಷೇತ್ರದಲ್ಲಿ ಡಾ. ಅಬ್ದುಲ್ ಮನ್ನಾನ್ ಎಐಎಂಐಎಂ ಅಭ್ಯರ್ಥಿಯಾಗಿದ್ದು, ಎಐಎಂಐಎಂನ ತಾಲಿಬ್ ಸಿದ್ದಿಕಿ ಭೋಜ್ ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಫುರ್ಖಾನ್ ಚೌಧರಿ ಅವರು ಹಾಪುರ್ ಜಿಲ್ಲೆಯ ಗಡ್ ಮುಕ್ತೇಶ್ವರದಿಂದ AIMIM ಅಭ್ಯರ್ಥಿಯಾಗಿದ್ದು, ಹಾಜಿ ಆರಿಫ್ ಅದೇ ಜಿಲ್ಲೆಯ ಧೌಲಾನಾದಿಂದ ಸ್ಪರ್ಧಿಸಲಿದ್ದಾರೆ.

- Advertisement -

ಎಐಎಂಐಎಂ ಸಿವಾಲ್ ಖಾಸಿಮ್ ನಿಂದ ರಫತ್ ಖಾನ್ ಮತ್ತು ಸರದಾನದಿಂದ ಜೀಶನ್ ಆಲಂ ಗೆ ಟಿಕೆಟ್ ನೀಡುತ್ತಿದೆ. ಕಿಥೋರ್ ನಿಂದ ತಸ್ಲೀಮ್ ಅಹ್ಮದ್ ಅವರನ್ನು ಎಐಎಂಐಎಂ ಪಕ್ಷ ಕಣಕ್ಕಿಳಿಸಿದೆ.

ಮುಜಾಫರ್ ನಗರ ಜಿಲ್ಲೆಯಲ್ಲಿ ತಾಹಿರ್ ಅನ್ಸಾರಿ ಚಾರ್ತಾವಾಲ್ ಮತ್ತು ಇಂತೇಜಾರ್ ಅನ್ಸಾರಿ ಮುಜಾಫರ್ ನಗರದ ಸದಾರ್ ನಿಂದ ಸ್ಪರ್ಧಿಸಲಿದ್ದು, ಬರೇಲಿ ಜಿಲ್ಲೆಯಲ್ಲಿ ಶಾಹೀನ್ ರಜಾ ಖಾನ್ (ಬರೇಲಿ-124) ಮತ್ತು ತೌಫೀಕ್ ಪರ್ಧಾನ್ (ಬಿತ್ರಿ ಚೈನ್ಪುರ್) ಎಐಎಂಐಎಂ ಅಭ್ಯರ್ಥಿಗಳಾಗಿದ್ದಾರೆ.

ಇತರ ಅಭ್ಯರ್ಥಿಗಳೆಂದರೆ ಅಮ್ಜದ್ ಅಲಿ (ಬೆಹತ್), ಮಾರ್ಗೂಬ್ ಹಸನ್ (ಸಹರಾನ್ಪುರ್ ದೇಹತ್), ಸಾದಿಕ್ ಅಲಿ (ಝಾನ್ಸಿ ಸದರ್) ಮತ್ತು ಶೇರ್ ಅಫ್ಘಾನ್ (ರುದೌಲಿ) ಕ್ಷೇತ್ರದ ಅಭ್ಯರ್ಥಿಗಳಾಗಿದ್ದಾರೆ.



Join Whatsapp