ನವದೆಹಲಿ : ಆರನೇ ವೇತನ ಆಯೋಗ ಶಿಫಾರಸ್ಸು ಜಾರಿಗೆ ಒತ್ತಾಯಿಸಿ ಮತ್ತು ಗುತ್ತಿಗೆ ನೇಮಕಾತಿ ವಿರುದ್ಧ ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟು ಎಐಐಎಂಎಸ್ ದಾದಿಯರ ಸಂಘ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿದೆ. ಮುಷ್ಕರ ಸ್ಥಗಿತಗೊಳಿಸಿ, ಕರ್ತವ್ಯಕ್ಕೆ ಹಾಜರಾಗುವಂತೆ ಎಐಐಎಂಎಸ್ ನಿರ್ದೇಶಕರು ಮನವಿ ಮಾಡಿದ್ದರೂ ಲೆಕ್ಕಿಸದ ನರ್ಸ್ ಗಳು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.
ಸುಮಾರು 5,000 ನರ್ಸ್ ಗಳು ಮಧ್ಯಾಹ್ನ ನಂತರ ಮುಷ್ಕರಕ್ಕೆ ಮುಂದಾಗಿರುವುದು ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಎಐಐಎಂಎಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ನರ್ಸ್ ಗಳ 23 ಬೇಡಿಕೆಗಳಲ್ಲಿ ಬಹುತೇಕ ಬೇಡಿಕೆಗಳನ್ನು ಇತ್ಯರ್ಥ ಪಡಿಸಲಾಗಿದೆ. ವೇತನ ಏರಿಕೆ ಕುರಿತು ಕಾಳಜಿ ವಹಿಸಲಾಗುತ್ತದೆ ಎಂದು ಗುಲೇರಿಯಾ ಹೇಳಿದ್ದಾರೆ. ಮುಷ್ಕರ ಕೈಬಿಟ್ಟು, ಸೇವೆಗೆ ಹಾಜರಾಗುವಂತೆ ಅವರು ನರ್ಸ್ ಗಳಲ್ಲಿ ಮನವಿ ಮಾಡಿದ್ದಾರೆ.