ಏಮ್ಸ್:  ಸೈಬರ್ ದಾಳಿಯಲ್ಲಿ ಕಳೆದುಹೋದ ದತ್ತಾಂಶಗಳು ಮರು ಸ್ಥಾಪನೆ

Prasthutha|

ನವದೆಹಲಿ: ಸೈಬರ್ ದಾಳಿಯಲ್ಲಿ ಕಳೆದುಹೋದ ಇ-ಆಸ್ಪತ್ರೆಯ ದತ್ತಾಂಶವನ್ನು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಮರುಸ್ಥಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೇಟಾ ಪ್ರಮಾಣವು ಹೆಚ್ಚಾಗಿರುವುದರಿಂದ ಆನ್ಲೈನ್ ಸೇವೆಗಳು ಪುನರಾರಂಭಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಸತತ ಎಂಟನೇ ದಿನವೂ, ಒಪಿ, ಐಪಿ ಮತ್ತು ಲ್ಯಾಬ್ ಚಟುವಟಿಕೆಗಳನ್ನು ಉದ್ಯೋಗಿಗಳು ನೇರವಾಗಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -

ಈ ಮಧ್ಯೆ ಸೈಬರ್ ದಾಳಿಯ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್ ನೀಡಿದ ಇಬ್ಬರು ಸಿಸ್ಟಮ್ ವಿಶ್ಲೇಷಕರನ್ನು ಅಮಾನತುಗೊಳಿಸಲಾಗಿದೆ. ಕಾರ್ಯಾಚರಣೆಗಳು ಆನ್ ಲೈನ್ ನಲ್ಲಿ ಇಲ್ಲದ ಕಾರಣ ಆಸ್ಪತ್ರೆಯ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ಸುಮಾರು 4 ಕೋಟಿ ರೋಗಿಗಳ ವಿವರಗಳನ್ನು ಹೊಂದಿರುವ ಸರ್ವರ್ ಬುಧವಾರ ಬೆಳಿಗ್ಗೆ ನಿಷ್ಕ್ರಿಯವಾಗಿದೆ.

- Advertisement -