ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ವರ್ಷದ ವಿಶೇಷ ವ್ಯಕ್ತಿ ಪುರಸ್ಕಾರ

Prasthutha|

►ಗಾಯಿತ್ರಿ ನಿವಾಸ್, ನರಸಿಂಹ ರಾವ್ ಸೇರಿ ಹಲವು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ

- Advertisement -

ಬೆಂಗಳೂರು: ಬೆಂಗಳೂರು ಪ್ರೆಸ್‌ ಕ್ಲಬ್‌ನ 2022ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂದು ಪ್ರದಾನ ಮಾಡಲಾಯಿತು.

ಸುಪ್ರೀಂಕೋರ್ಟ್ ನಿವೃತ್ತ  ನ್ಯಾಯಮೂರ್ತಿ ಡಾ.ವಿ.ಗೋಪಾಲಗೌಡ ಅವರು ಪ್ರದಾನ ಮಾಡಿದರು.

- Advertisement -

ಪ್ರೆಸ್‌ಕ್ಲಬ್ ವರ್ಷದ ವಿಶೇಷ ಪ್ರಶಸ್ತಿಯನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ  ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ,  ಹಿರಿಯ ಪತ್ರಕರ್ತರಾದ ಎಚ್.ಎಸ್.ಬಲರಾಮ್, ಗಂಗಾಧರ ಮೊದಲಿಯಾರ್, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಓಂಕಾರ ಕಾಕಡೆ, ನರಸಿಂಹರಾವ್, ಸೇರಿದಂತೆ 33 ಮಂದಿ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ವಿಧಾನಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಗೋವಿಂದರಾಜು, ಬೆಂಗಳೂರು  ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಖಜಾಂಚಿ ಮೋಹನ್ ಕುಮಾರ್  ಹಾಗೂ ಪದಾಧಿಕಾರಿಗಳು ಸೇರಿದಂತೆ  ಮತ್ತಿತರರು  ಉಪಸ್ಥಿತರಿದ್ದರು.

Join Whatsapp