ಮೋಹನ್ ಭಾಗವತ್ ರನ್ನು ‘ರಾಷ್ಟ್ರಪಿತ’ ಎಂದ ಅಹ್ಮದ್ ಇಲ್ಯಾಸಿಗೆ ‘ವೈ’ ಪ್ಲಸ್ ಭದ್ರತೆ

Prasthutha|

ನವದೆಹಲಿ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ‘ರಾಷ್ಟ್ರಪಿತ’ ಎಂದು ಕರೆದಿದ್ದಕ್ಕೆ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿರುವ  ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರಿಗೆ ವೈಪ್ಲಸ್  ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ.

- Advertisement -

ಇಲ್ಯಾಸಿ ಸೆಪ್ಟೆಂಬರ್ 22 ರಂದು ಭಾಗವತ್ ಅವರನ್ನು ಭೇಟಿಯಾಗಿ ಅವರನ್ನು ‘ರಾಷ್ಟ್ರಪಿತ’ ಎಂದು ಕರೆದಿದ್ದರು. ಇದಕ್ಕಾಗಿ ಇಂಗ್ಲೆಂಡ್, ದುಬೈ ಮತ್ತು ಕೊಲ್ಕತ್ತಾದಿಂದ ದೂರವಾಣಿ ಮೂಲಕ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿ ತಿಲಕ್ ಲೇನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಗೃಹ ವ್ಯವಹಾರಗಳ ಸಚಿವಾಲಯವು ನೀಡಿದ ವೈ+ ಶ್ರೇಣಿಯ ಭದ್ರತೆಗಾಗಿ ನಾನು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಇಲ್ಯಾಸಿ ತಿಳಿಸಿದರು.

- Advertisement -

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಆರ್ ಎಸ್ ಎಸ್ ನ ಇತರ ಹಿರಿಯ ಕಾರ್ಯಕರ್ತರು ನವದೆಹಲಿಯ ಮಸೀದಿಯಲ್ಲಿ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದರು. ಕಸ್ತೂರಬಾ ಗಾಂಧಿ ಮಾರ್ಗದಲ್ಲಿ ನಡೆದ ಈ ಸಭೆ ಒಂದು ಗಂಟೆಗೂ ಹೆಚ್ಚು ಕಾಲ ನಡೆದಿತ್ತು.

Join Whatsapp