ನವದೆಹಲಿ: ಹಿಂದೂ ಸಮಾಜವನ್ನು ಮಿಲಿಟರೀಕರಣಗೊಳಿಸಬೇಕು ಎಂಬ ಸಾವರ್ಕರ್ ಗುರಿಯನ್ನು ಬಿಜೆಪಿ ಸರ್ಕಾರ ಅಗ್ನಿಪಥ್ ಯೋಜನೆಯ ಮೂಲಕ ಈಡೇರಿಸುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.
ಬಿಜೆಪಿಯ ಈ ಯೋಜನೆಯು ಸಶಸ್ತ್ರ ಪಡೆ ಮತ್ತು ಸಮಾಜಕ್ಕೆ ಮಾರಕವಾಗಿದೆ ಎಂದು ಸಿಪಿಐ(ಎಂ) ಪೀಪಲ್ಸ್ ಡೆಮಾಕ್ರಸಿಯಲ್ಲಿ ಉಲ್ಲೇಖಿಸಿದೆ.
ಅಗ್ನಿಪಥ್ ಯೋಜನೆ ಹಿಂದುತ್ವ ಆಧಾರದಲ್ಲಿ ಭಾರತ ಮತ್ತು ಅದರ ತನಿಖಾ ಸಂಸ್ಥೆಗಳನ್ನು ಮರು ರೂಪಿಸುವ ಬೃಹತ್ ದೊಡ್ದ ಷಡ್ಯಂತರದ ಭಾಗವಾಗಿ ಪರಿಗಣಿಸಬೇಕಾಗಿದೆ. ಇತರ ಸರ್ವಾಧಿಗಳಂತೆ ಹಿಂದುತ್ವದ ಪ್ರತಿಪಾದಕರು ತಮ್ಮ ಸೈದ್ಧಾಂತಿಕ ವಿಚಾರಧಾರೆಯ ಆಧಾರದಲ್ಲಿ ಸಶಸ್ತ್ರ ಪಡೆಗಳ ಪುನರ್ರಚನೆಯನ್ನು ಮಾಡುತ್ತಿದ್ದಾರೆ. ಶಸ್ತ್ರಾಭ್ಯಾಸವನ್ನು ಪಡೆದ ಸಾವಿರಾರು ಸೈನಿಕರು ಪ್ರತಿವರ್ಷ ಸಮಾಜಕ್ಕೆ ಬರುತ್ತಿದ್ದು, ಹಿಂದೂ ಸಮಾಜವನ್ನು ಮಿಲಿಟರೀಕರಣಗೊಳಿಸುವ ಸಾವರ್ಕರ್ ಅವರ ಗುರಿಯನ್ನು ಪೂರೈಸುವಲ್ಲಿ ಸ್ವಲ್ಪಮಟ್ಟಿಗೆ ನೆರವಾಗುತ್ತಿದೆ ಎಂದು ಸಂಪಾದಕೀಯದಲ್ಲಿ ತಿಳಿಸಿದೆ.