ಅಗ್ನಿಪಥ್ ಹಿಂಸಾಚಾರ: ರೈಲಿಗೆ ಬೆಂಕಿ ಹಚ್ಚಿದ 10 ಮಂದಿಯ ಬಂಧನ

Prasthutha|

ನವದೆಹಲಿ: ಸೇನೆಯಲ್ಲಿ ನೇಮಕಾತಿಗಾಗಿ ಅಗ್ನಿಪಥ್ ಯೋಜನೆ ವಿರುದ್ಧ ತೆಲಂಗಾಣದ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಬೆಂಕಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ 10 ಜನರನ್ನು ಬಂಧಿಸಿದ್ದಾರೆ. ಏತನ್ಮಧ್ಯೆ, ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

- Advertisement -

ವೀಡಿಯೊದಲ್ಲಿ, ಇಬ್ಬರು ಯುವಕರು ರೈಲಿನ ವಿವಿಧ ಬರ್ತ್ ಗಳಿಗೆ ಬೆಂಕಿ ಹಚ್ಚುವುದನ್ನು ಕಾಣಬಹುದು. ಎರಡನೇ ವೀಡಿಯೊದಲ್ಲಿ, ಹಲವಾರು ಯುವಕರು ರೈಲಿನ ಬೋಗಿಗಳ ಬಾಗಿಲುಗಳು ಮತ್ತು ಕಿಟಕಿಗಳನ್ನು ಹಾನಿಗೊಳಿಸುವುದನ್ನು ಮತ್ತು ದೊಣ್ಣೆಗಳಿಂದ ಗಾಜನ್ನು ಮುರಿಯುವುದನ್ನು ಕಾಣಬಹುದು.

ರೈಲ್ವೆ ನಿಲ್ದಾಣದಲ್ಲಿ ಬೆಂಕಿ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 23 ವರ್ಷದ ಪೃಥ್ವಿರಾಜ್ ಎಂಬ ಯುವಕನನ್ನು ಆದಿಲಾಬಾದ್ ಜಿಲ್ಲೆಯ ಸೋನಾಪುರ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಯ ಪ್ರಕಾರ, ಆರೋಪಿಯ ಮೊಬೈಲ್  ಪೊಲೀಸರು ವಶಪಡಿಸಿಕೊಂಡ ವೀಡಿಯೊದಲ್ಲಿ, ಪೃಥ್ವಿರಾಜ್ ರೈಲಿನ ಬರ್ತ್ ಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ, ಇದು ಜೂನ್ 22 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ  ಎಂದು ಪೊಲೀಸರು ತಿಳಿಸಿದ್ದಾರೆ

Join Whatsapp